ಉಮಲೂಟಿ ಗ್ರಾಮದಲ್ಲಿ ಸೋಮವಾರ ಜೋಳ ಖರೀದಿ ಕೇಂದ್ರಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ವಿವಿಧೋದ್ದೇಶ ಪ್ರಾಗ್ರಾಕೃಸ ಸಂಘದ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ರಾಮಚಂದ್ರಪ್ಪ, ಶರಣಯ್ಯಸ್ವಾಮಿ ಕಲ್ಮಂಗಿ, ಸಿದ್ದಪ್ಪ ಇತರರಿದ್ದರು.
- ಶಾಸಕ ಆರ್.ಬಸನಗೌಡ ತುರ್ವಿಹಾಳ ಸಲಹೆ
- ಸಿಂಧನೂರು ಉಮಲೂಟಿ ಖರೀದಿ ಕೇಂದ್ರಕ್ಕೆ ಚಾಲನೆ
ಸಿಂಧನೂರು: ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭಿಸಿದ್ದು, ಅರ್ಹ ರೈತರು ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಉಮಲೂಟಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೋಳ ಕ್ವಿಂ.ಗೆ 3699 ಬೆಂಬಲ ಬೆಲೆ ಇದ್ದು, ರೈತರಿಗೆ ಅನುಕೂಲವಾಗಲಿದೆ. ಕೆಲವೆಡೆ ಅನರ್ಹ ರೈತರು ನೋಂದಣಿ ಮಾಡಿರುವ ದೂರುಗಳಿದ್ದು, ಈಗಾಗಲೇ ತನಿಖೆ ನಡೆಯುತ್ತಿದೆ. ಅರ್ಹ ರೈತರಿಗೆ ಸರ್ಕಾರದ ಸೌಲಭ್ಯ ಸಿಗಬೇಕಿದೆ ಎಂದರು.
ಸಂಘದ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕರಾದ ಶರಣಯ್ಯಸ್ವಾಮಿ ಕಲ್ಮಂಗಿ, ಸಿದ್ದಪ್ಪ, ರವಿಗೌಡ, ಪಾರ್ವತಮ್ಮ, ಶ್ರೀದೇವಿ, ರಿಯಾನ್, ಪ್ರಮುಖರಾದ ಶಂಕರಗೌಡ, ಮುದ್ದನಗೌಡ, ಸಹಕಾರಿ ವ್ಯವಸ್ಥಾಪಕ ವೀರಭದ್ರಗೌಡ, ರಂಗನಗೌಡ ಜಾಗೀರದಾರ, ಸೋಮಣ್ಣ, ಬಲವಂತರಾಯಗೌಡ, ಕಾಸಿಂಸಾಬ್, ರುದ್ರಯ್ಯ, ವೀರಭದ್ರಯ್ಯ, ಅಯ್ಯಪ್ಪ ಇದ್ದರು.