ಸಿಂಧನೂರಿನ ತಹಸಿಲ್ ಕಚೇರಿ ಮುಂದೆ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ ನಡೆಸಿಸಲಾಯಿತು.
ಸಿಂಧನೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ನಡೆಯುವ ಗೋಹತ್ಯೆ ತಡೆಗಟ್ಟಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅರುಣ್ ದೇಸಾಯಿಗೆ ಮನವಿ ಸಲ್ಲಿಸಲಾಯಿತು.
ಗೋವುಗಳನ್ನು ವಧೆ ಮಾಡುವುದು ಖಂಡನೀಯವಾಗಿದ್ದು, ನಿಲ್ಲಬೇಕು. ಸನಾತನ ಧರ್ಮವನ್ನು ಉಳಿಸಿಕೊಳ್ಳದಿದ್ದರೆ ನಮಗೆ ಬೇರೆ ದೇಶವಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ನಿರ್ದಿಷ್ಟವಾದ ಕಾನೂನು ಜಾರಿಗೆ ತರಬೇಕು. ಪ್ರತಿ ವರ್ಷದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ (ಬಕ್ರೀದ್, ರಂಜಾನ್ ) ಕಾನೂನು ಮೀರಿ ಗೋಹತ್ಯೆ ಮಾಡಲಾಗುತ್ತಿದೆ. ಕೂಡಲೇ ಗೋಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಎಚ್‌ಪಿ ಜಿಲ್ಲಾ ಪ್ರಮುಖ ದುರ್ಗಾಪ್ರಸಾದ್ ಶರ್ಮ, ಬಜರಂಗದಳದ ಜಿಲ್ಲಾ ಸಂಚಾಲಕ ಬಸವರಾಜ ಸಾಲಗುಂದ, ದೇವರಾಜ ಪಾಟೀಲ್, ವಿಶ್ವನಾಥ ಚೌಧರಿ, ಮನೋಹರ ಹಿರೇಮಠ, ನಾಗೇಶ ಪವಾರ್, ಕಿಶೋರಕುಮಾರ, ಶಿವಕುಮಾರ, ದೀಪು ಸಾಲಿಮಠ, ಶಿವಪ್ರಸಾದ, ನೆಕ್ಕಂಟಿ ಸುರೇಶ, ರಾಮಾಂಜನೇಯ, ಉದಯಕುಮಾರ, ಅಕ್ಷಯಗೌಡ, ಶಿವು ಹಿರೇಮಠ, ಬಸವರಾಜ ತೆಂಗಿನಕಾಯಿ, ಚೌದ್ರಿ, ಅನಿಲಕುಮಾರ, ಪ್ರಹ್ಲಾದ್ ಕೆಂಗಲ್, ಆನಂದಸಿಂಗ್, ನಾಗರಾಜ, ಮನೋಜ್‌ಕುಮಾರ್, ಪ್ರದೀಪ್, ದೀಪು ನಾಯಕ, ವಿಜಯಲಕ್ಷ್ಮೀ, ಸುಮಿತ್ರಾ, ರಾಜೇಶ್ವರಿ ಇದ್ದರು.