ಸಿಂಧನೂರಿನ ತಹಸೀಲ್ದಾರ್ ಅರುಣ್ ದೇಸಾಯಿಗೆ ಗುರುವಾರ ದಲಿತಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು.ಪ್ರಮುಖರಾದ ಮೌನೇಶ ಜಾಲವಾಡಗಿ, ಹನುಮಂತಪ್ಪ ಗೋಮರ್ಸಿ, ಮರಿಯಪ್ಪ ಬಿಎಸ್‌ಪಿ, ನರಸಪ್ಪ ಕಟ್ಟಿಮನಿ, ಶಿವರಾಜ ಉಪ್ಪಲದೊಡ್ಡಿ ಇತರರಿದ್ದರು.
- ದಲಿತಪರ ಸಂಘಟನೆಗಳ ಒಕ್ಕೂಟ ಒತ್ತಾಯ
- ಸಿಂಧನೂರು ತಹಸೀಲ್ದಾರ್‌ಗೆ ಮನವಿ
ಸಿಂಧನೂರು; ಕೊಪ್ಪಳ ಜಿಲ್ಲೆಯ ಬೋಚನಹಳ್ಳಿ, ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ, ಮಸ್ಕಿಯ ಎಂ.ರಾಮಲದಿನ್ನಿ ಹಾಗೂ ನಗರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತಕ್ಷಣ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ತಹಸೀಲ್ದಾರ್ ಅರುಣ್ ದೇಸಾಯಿಗೆ ಮನವಿ ಸಲ್ಲಿಸಿತು.
ಬೋಚನಹಳ್ಳಿ, ಗೆಜ್ಜಲಗಟ್ಟ, ಎಂ.ರಾಮಲದಿನ್ನಿ ಹಾಗೂ ಸಿಂಧನೂರಿನಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣಗಳ ನಿಷ್ಪಕ್ಷಪಾತ ಹಾಗೂ ತ್ವರಿತ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಅನ್ವಯಿಸುವ ಕಾನೂನುಗಳಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ದಲಿತರ ಮೇಲೆ ದುರುದ್ದೇಶದಿಂದ ದಾಖಲಿಸಿರುವ ಎಲ್ಲ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ಸಂಪೂರ್ಣ ಪರಿಹಾರ, ರಕ್ಷಣೆ ಹಾಗೂ ಪುನರ್ವಸತಿ ಒದಗಿಸಬೇಕು.ದಲಿತರ ಮೇಲಿನ ಜಾತಿ ದೌರ್ಜನ್ಯಗಳನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ರಾಜ್ಯ ಮಟ್ಟದಲ್ಲಿ ವಿಶೇಷ ನಿಗಾ ವ್ಯವಸ್ಥೆ ರೂಪಿಸಿ, ಜಾತಿ ದೌರ್ಜನ್ಯ ಎಸಗುವವರ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು.
ಪ್ರಮುಖರಾದ ಮೌನೇಶ ಜಾಲವಾಡಗಿ, ಹನುಮಂತಪ್ಪ ಗೋಮರ್ಸಿ, ಮರಿಯಪ್ಪ ಬಿಎಸ್‌ಪಿ, ನರಸಪ್ಪ ಕಟ್ಟಿಮನಿ, ಶಿವರಾಜ ಉಪ್ಪಲದೊಡ್ಡಿ, ನಿರುಪಾದಿ ಸಾಸಲಮರಿ, ಸಾಗರ, ಉಮೇಶ ಸುಕಾಲ್‌ಪೇಟೆ, ಬಸವರಾಜ್ ಬಾದರ್ಲಿ, ವೆಂಕಟೇಶ ಗಿರಿಜಾಲಿ, ಆಲಂಬಾಷಾ, ಈರಣ್ಣ ಸುಲ್ತಾನಪುರ, ಹನುಮೇಶ ಮೈತ್ರಿ, ಪಂಪಾಪತಿ ಹಂಚಿನಾಳ, ಸುರೇಶ ಎಲೆಕೂಡ್ಲಿಗಿ, ಜಂಬಣ್ಣ ಉಪ್ಪಲದೊಡ್ಡಿ, ರಮೇಶ ಶ್ರೀನಿವಾಸ ಕ್ಯಾಂಪ್, ಹುಸೇನಪ್ಪ ವಿರುಪಾಪುರ, ಮುದಿಯಪ್ಪ ಹೊಸಳ್ಳಿ, ಎಚ್.ಆರ್.ಹೊಸಮನಿ, ಮಾಬುಸಾಬ್ ಬೆಳ್ಳಟ್ಟಿ ಇದ್ದರು.