ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. 
ರಾಯಚೂರು

ಮದ್ಯ ಅಕ್ರಮ ಮಾರಾಟ ವಿರುದ್ಧ ಕ್ರಮವಹಿಸಿ

ಲಿಂಗಸುಗೂರು: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಸಹಾಯಕ ಆಯುಕ್ತ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಹಲವು ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಅಪಘಾತ ಪ್ರಕರಣಗಳೂ ಹೆಚ್ಚಾಗುತ್ತಿವೆ. 
ಶಾಲಾ, ಕಾಲೇಜುಗಳ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೆ, ಅಬಕಾರಿ ಅಧಿಕಾರಿಗಳು ದಾಳಿ ನಡೆಸಲೂ ಮುಂದಾಗುತ್ತಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ರವಿಕುಮಾರ ಬರಗೂಡಿ, ಅಜೀಜ್ ಪಾಷಾ, ಮೋಸಿನ್‌ಖಾನ್, ತಿಮ್ಮನಗೌಡ, ಅಲ್ಲಾವುದ್ದೀನ್ ಬಾಬಾ, ಬಸನಗೌಡ, ಮಲ್ಲಣ್ಣ, ಮಾರೆಪ್ಪ, ರಹೀಂ, ಪ್ರಭುಗೌಡ, ನಾಗರಾಜ, ಕಾಸಿಂ ಸಾಬ್, ವೀರೇಶ ಹಿರೇಮನಿ, ರಮೇಶ ನಾಯಕ, ರಾಮಣ್ಣ, ಅಮರೇಶ ನಾಯಕ ಇದ್ದರು.