ಹಟ್ಟಿಚಿನ್ನದಗಣಿ ಪೊಲೀಸ್ ಠಾಣೆ ಮುಂದೆ ಜ್ಯೋತಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.  
ರಾಯಚೂರು

ಯುವತಿ ಕೊಲೆ ಆರೋಪಿಗಳ ಬಂಧಿಸಿ

ಪ್ರಮುಖ ಮುಖ್ಯಾಂಶಗಳು

  • ಹಟ್ಟಿ ಠಾಣೆ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ
ಯುವತಿ ಕೊಲೆ ಆರೋಪಿಗಳ ಬಂಧಿಸಿ Suspects arrested in murder of young woman
ಹಟ್ಟಿಚಿನ್ನದಗಣಿ: ಪಟ್ಟಣದ ಹೊರವಲಯದಲ್ಲಿ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಯುವತಿ ಜ್ಯೋತಿ ಸಾವಿನ ಕುರಿತು ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದು, ಮಂಗಳವಾರ ಸಂಜೆ ಪಟ್ಟಣ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ಮಂಗಳವಾರ ಸಂಜೆ ಯುವತಿ ಶವ ಹೊತ್ತು ಠಾಣೆಗೆ ಬಂದ ಕುಟುಂಬಸ್ಥರು, ಜ್ಯೋತಿ ಸಹಜ ಸಾವಲ್ಲ ಕೊಲೆ ಮಾಡಲಾಗಿದೆ. ಜ್ಞಾನಮೂರ್ತಿ ಹಾಗೂ ಜ್ಯೋತಿ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಬೇರೆ ಸಂಬಂಧ ನೋಡಲಾಗುತ್ತಿತ್ತು.
ಹೀಗಾಗಿ ಸೋಮವಾರ ಜ್ಯೋತಿ, ಜ್ಞಾನಮೂರ್ತಿ ಮನೆಗೆ ಹೋಗಿ ಮದುವೆಯಾಗುವಂತೆ ಕೇಳಿದ್ದಾಳೆ. ಇದಕ್ಕೆ ಒಪ್ಪದ ಜ್ಞಾನಮೂರ್ತಿ ಹಾಗೂ ಕುಟುಂಬದವರು ನಿರಾಕರಿಸಿದ್ದಾರೆ. ನಂತರ ಪಟ್ಟಣ ಹೊರವಲಯದಲ್ಲಿ ಜ್ಯೋತಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಲಾಗಿದೆ. ಪ್ರಿಯಕರ ಹಾಗೂ ಆತನ ಕುಟುಂಬದವರು ಕೊಲೆ ಮಾಡಿರುವ ಅನುಮಾನವಿದೆ. ಆದ್ದರಿಂದ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಮೃತಳ ಅಕ್ಕ ಬಸಮ್ಮ ಸೇರಿ ಇತರರು ಒತ್ತಾಯಿಸಿದರು.
ಠಾಣೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪಿಐ ಶಿವಾನಂದ ಗಾಣಿಗೇರಾ ಅವರು ಮಾತನಾಡಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದ ಜ್ಯೋತಿ ಕುಟುಂಬಸ್ಥರು, ಅಂತ್ಯಸಂಸ್ಕಾರ ನೆರವೇರಿಸಿದರು. ಮೃತಳ ಅಕ್ಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.