ಲಿಂಗಸುಗೂರಿನಲ್ಲಿ ಸರ್ಕಾರಿ ನೌಕರರ ಸಂಘದ ಮಹಾಸಭೆಯನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟಿಸಿದರು. ವಿಠಲ ಮಹಾರಾಜ ಸ್ವಾಮೀಜಿ, ಬದ್ದು ಮಹಾರಾಜ ಸ್ವಾಮೀಜಿ, ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್.ನಾಯಕ, ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಆರ್.ಎಸ್.ನಾಡಗೌಡರ ಇತರರಿದ್ದರು.
- ಮಾಜಿ ಸಚಿವ ಶಿವನಗೌಡ ನಾಯಕ ಸಲಹೆ
- ಸರ್ಕಾರಿ ನೌಕರರ ಸಂಘದ ಮಹಾಸಭೆ
ಲಿಂಗಸುಗೂರು: ಬಂಜಾರ ಸಮಾಜದವರು ಶಿಕ್ಷಣಕ್ಕೆ ಮಹತ್ವ ನೀಡಬೇಕು. ಜಗಜ್ಯೋತಿ ಬಸವಣ್ಣ ಅವರ ತತ್ವದಂತೆ ಕಾಯಕಕ್ಕೆ ಆದ್ಯತೆ ನೀಡಿದರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಮಾಜಿ ಸಚಿವ ಶಿವನಗೌಡ ನಾಯಕ ಹೇಳಿದರು.
ಕಲಾಪ್ರಭು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾಸಭೆಯಲ್ಲಿ ಮಾತನಾಡಿದರು. ಬಂಜಾರ ಸಮಾಜದವರು ಎಲ್ಲರೊಂದಿಗೆ ಒಗ್ಗಟ್ಟಿನಿಂದ ಬೆರೆಯುತ್ತಾರೆ ಎಂದು ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ನಾಡಗೌಡ ಮಾತನಾಡಿ, ಬಂಜಾರ ಸಮುದಾಯದವರು ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸಮಾಜದವರು ಒಗ್ಗಟ್ಟಾಗಿದ್ದರೆ ರಾಜಕೀಯದಲ್ಲಿ ಯಶಸ್ಸು ಕಾಣಬಹುದು ಎಂದರು. ಇದೇ ವೇಳೆ ತೋಟಗಾರಿಕೆ ಇಲಾಖೆ ಅಧಿಕಾರಿ ತಾವರೆಪ್ಪ ನಾಯಕ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಅಂಕಲಿಮಠದ ವೀರಭದ್ರ ಸ್ವಾಮೀಜಿ, ವಿಠಲ ಮಹಾರಾಜ ಸ್ವಾಮೀಜಿ, ಬದ್ದು ಮಹಾರಾಜ ಸ್ವಾಮೀಜಿ, ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್.ನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಪ್ರಮುಖರಾದ ಡಿ.ಜಿ.ಗುರಿಕಾರ, ಜೀವಲಪ್ಪ ನಾಯಕ, ನಾರಾಯಣಪ್ಪ ರಾಠೋಡ, ವೆಂಕಟೇಶ ರಾಠೋಡ, ಬಸನಗೌಡ ಮೇಟಿ ಈಚನಾಳ, ಬಸನಗೌಡ ಕಂಬಳಿ, ಅಶೋಕ ಅಂಚಲಿ, ಅಮರೇಶಪ್ಪ ಹೂನೂರು, ತಾವರೆಪ್ಪ ರಾಠೋಡ ಇತರರಿದ್ದರು.