ಬೂದಿವಾಳ ಕ್ಯಾಂಪ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲುವೆ ಸ್ವಚ್ಛತಾ ಕಾರ್ಯದ ಸಮಾರೋಪ ಕಾರ್ಯಕ್ರಮದಲ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿದರು. ಪ್ರಮುಖರಾದ ಅಮರೇಶಗೌಡ ಗೊರೇಬಾಳ, ಬಸಾಪುರ ರಾಮನಗೌಡ, ಶರಣೇಗೌಡ ಪೊಲೀಸ್ ಪಾಟೀಲ್, ದೊಡ್ಮನೆ ದೇವೇಂದ್ರಗೌಡ ಗೊರೇಬಾಳ, ಎಂ. ಮಲ್ಲನಗೌಡ ಇತರರಿದ್ದರು. 
ರಾಯಚೂರು

ಉಪಕಾಲುವೆ ಸ್ವಚ್ಛತಾ ಕಾರ್ಯ ಪೂರ್ಣ

ನರೇಶ್ ಕುಮಾರ್
ಗೊರೇಬಾಳ: ತುಂಗಭದ್ರಾ ಎಡದಂಡೆ ನಾಲೆಯ 36ನೇ ಉಪ ಕಾಲುವೆಯನ್ನು ಜು.4ರಿಂದ ಎಂಟು ದಿನಗಳ ಕಾಲ ಸ್ವಚ್ಛಗೊಳಿಸಲಾಗಿದೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಹೇಳಿದರು.
ಬೂದಿವಾಳ ಕ್ಯಾಂಪ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲುವೆ ಸ್ವಚ್ಛತಾ ಕಾರ್ಯದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. 
36ನೇ ಉಪ ಕಾಲುವೆ ಸ್ವಚ್ಛತಾ ಕಾರ್ಯವನ್ನು ಎಂಎಲ್ಸಿ ಬಸನಗೌಡ ಬಾದರ್ಲಿ ಅವರ ಫೌಂಡೇಷನ್‌ನಿಂದ ಕೈಗೊಳ್ಳಲಾಗಿತ್ತು. ಜಲಾಶಯದಿಂದ ಹರಿಸಿದಲ್ಲಿ ಶುದ್ಧವಾದ ನೀರು ಸಿಗಲಿ ಎಂಬ ಉದ್ದೇಶದಿಂದ ಎಂಎಲ್ಸಿ ಬಸನಗೌಡ ಬಾದರ್ಲಿ ಅವರು ಈ ಕಾರ್ಯ ಕೈಗೆತ್ತಿಕೊಂಡಿದ್ದರು. ಅವರ ಸಂಕಲ್ಪದಂತೆ ಸ್ವಚ್ಛತಾ ಕಾರ್ಯ ಮುಗಿದಿದ್ದು, ಮಿತವಾಗಿ ನೀರು ಬಳಕೆ ಮಾಡಬೇಕು ಎಂದರು. 
ಪ್ರಮುಖ ಅಮರೇಶಗೌಡ ಗೊರೇಬಾಳ ಮಾತನಾಡಿ, ಉಪ  ಕಾಲುವೆಯಲ್ಲಿ ಜನರ ಕಸಕಡ್ಡಿ ಹಾಕಬಾರದು. ಬಚ್ಚಲು ನೀರು ಹರಿಸಲು, ಶೌಚಕ್ಕೆ ಬಳಸಬಾರದು. ಈ ಮೂಲಕ ಜಲ ರಕ್ಷಣೆ ಮಾಡಬೇಕು ಎಂದರು. ಪ್ರಮುಖರಾದ ಬಸಾಪುರ ರಾಮನಗೌಡ, ಶರಣೇಗೌಡ ಪೊಲೀಸ್ ಪಾಟೀಲ್, ದೊಡ್ಮನೆ ದೇವೇಂದ್ರಗೌಡ ಗೊರೇಬಾಳ, ಎಂ. ಮಲ್ಲನಗೌಡ ಗೊರೇಬಾಳ, ರಾಜು ಬುಜವಾಳ ಕ್ಯಾಂಪ್, ದುರ್ಗೇಶ ಮಾಸನೂರ, ವಿರೂಪಾಕ್ಷ ರೆಡ್ಡಿ, ನೀರಾವರಿ ಇಲಾಖೆಯ ಅಧಿಕಾರಿ ನಾಗಪ್ಪ ಇದ್ದರು.