ಹಟ್ಟಿಚಿನ್ನದಗಣಿಯಲ್ಲಿ ಸಿಐಟಿಯುನಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು. ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ ಶಫೀ, ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಮುಖಂಡರಾದ ಶಾಂತಪ್ಪ ಆನ್ವರಿ, ಎಂ.ಡಿ ಅಮೀರಅಲಿ, ಸಂಗಯ್ಯಸ್ವಾಮಿ, ಯಂಕೋಬ ಮಿಯ್ಯಪುರ ಇತರರಿದ್ದರು. 
ರಾಯಚೂರು

ಕಾರ್ಮಿಕ ಸಂಹಿತೆ ವಿರೋಧಿಸಿ 12ರಂದು ಮುಷ್ಕರ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಹಟ್ಟಿಯಲ್ಲಿ
  • ಸಂಘದ
  • ಅಧ್ಯಕ್ಷ
ಹಟ್ಟಿಚಿನ್ನದಗಣಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಸಂಹಿತೆಗಳು ಸಂಪೂರ್ಣ ಕಾರ್ಮಿಕ ವಿರೋಧಿಯಾಗಿವೆ ಎಂದು ಹಟ್ಟಿಚಿನ್ನದಗಣಿ ಕಂಪನಿ ಕಾರ್ಮಿಕ ಸಂಘದ ಅಧ್ಯಕ್ಷ ಮಹಾಂತೇಶ ಕೆ. ಹೇಳಿದರು.
ಪಟ್ಟಣದ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಹಾಗೂ ವೃತ್ತಿ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತ ಸಂಹಿತೆಗಳು ಅನುಷ್ಠಾನಕ್ಕೆ ತಂದಲ್ಲಿ ಕಾರ್ಮಿಕರು ಹಲವು ದಶಕಗಳ ಹೋರಾಟದ ಮೂಲಕ ಪಡೆದ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಭೀತಿ ಇದೆ.
ಕನಿಷ್ಠ ವೇತನ, ಉದ್ಯೋಗ ಭದ್ರತೆ, ಕೆಲಸದ ಸಮಯ, ರಜೆ ಸೌಲಭ್ಯ, ಪಿಂಚಣಿ, ಭವಿಷ್ಯ ನಿಧಿ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕರ ಮೂಲ ಹಕ್ಕುಗಳಿಗೆ ಈ ಸಂಹಿತೆಗಳು ಗಂಭೀರ ಧಕ್ಕೆಯನ್ನುಂಟು ಮಾಡಲಿವೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಫೆ.12ರಂದು ಹಟ್ಟಿ ಚಿನ್ನದ ಗಣಿ ಕಂಪನಿಯನ್ನು ಸಂಪೂರ್ಣ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿ, ಹೊಸ ಕಾಯ್ದೆಗಳಿಂದ ಕಾರ್ಮಿಕರು ಮಾಲೀಕರ ದಯೆಯ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಚಿನ್ನದಗಣಿ ಕಂಪನಿ ಆಡಳಿತ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಮಿಕರನ್ನು ವಿಭಜಿಸುವ ನೀತಿ ಅನುಸರಿಸುತ್ತಿದೆ. ಕಾರ್ಮಿಕರಿಂದ ಮುಚ್ಚಳಿಕೆ ಪತ್ರಗಳು ಬರೆಸಿಕೊಂಡು ಕಾರ್ಮಿಕರನ್ನು ಮಾನಸಿಕ ಹಾಗೂ ಆರ್ಥಿಕವಾಗಿ ದಿವಾಳಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡರಾದ ಸಿದ್ದಪ್ಪ ಮುಂಡರಗಿ, ಹನುಮಂತಗೌಡ, ಮುನಿರುದ್ದೀನ್, ಗೌಸಮಿಯಾ, ಜಮದಗ್ನಿ, ರಮೇಶಬಾಬು, ಹನೀಫ್, ರಮೇಶ ವೀರಾಪುರ, ಗುಂಡಪ್ಪ ಇತರರಿದ್ದರು.