ಮಾನ್ವಿ ಓಂ ಮಂಡಳಿ ಶಿವಶಕ್ತಿ ಅವತಾರ್ ಸೇವಾ ಸಂಸ್ಥೆಯಲ್ಲಿ ಸೇವಾ ಸಂಸ್ಥಾನದ ಅಂಜನಾ ಅಕ್ಕ ಚಿಣ್ಣರಿಗೆ ಶ್ರೀರಕ್ಷೆಯನ್ನು ಕಟ್ಟಿದರು. ನಿರಂಜನ ಅಕ್ಕ ಇದ್ದರು.
- ಓಂ ಮಂಡಳಿ ಶಿವಶಕ್ತಿ ಅವತಾರ್ ಸೇವಾ ಸಂಸ್ಥಾನದ ಅಂಜನಾ ಅಕ್ಕ
- ಮಾನ್ವಿ ರಕ್ಷಾ ಬಂಧನದ ಕಾರ್ಯಕ್ರಮ
ಮಾನ್ವಿ: ಪ್ರತಿ ಹಬ್ಬಗಳಲ್ಲೂ ಒಂದು ಮುಖ್ಯವಾದ ಸಂದೇಶವಿರುತ್ತದೆ. ಅದೇರೀತಿ ರಕ್ಷಾಬಂಧನ ಹಬ್ಬದಲ್ಲಿ ಸಹೋದರಿ ತನ್ನ ಸಹೋದರನಿಗೆ ಶ್ರೀರಕ್ಷೆ ಕಟ್ಟುವುದರಿಂದ ಇಬ್ಬರ ಬಂಧನ ಗಟ್ಟಿಗೊಳ್ಳುತ್ತದೆ ಎಂದು ರಾಯಪುರದ ಓಂ ಮಂಡಳಿ ಶಿವಶಕ್ತಿ ಅವತಾರ್ ಸೇವಾ ಸಂಸ್ಥಾನದ ಅಂಜನಾ ಅಕ್ಕ ಹೇಳಿದರು.
ಓಂ ಮಂಡಳಿ ಶಿವಶಕ್ತಿ ಅವತಾರ್ ಸೇವಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನದ ಕಾರ್ಯಕ್ರಮದಲ್ಲಿ ಸಹೋದರ-ಸಹೋದರಿಯರಿಗೆ ಶ್ರೀರಕ್ಷೆಯನ್ನು ಕಟ್ಟಿ ಮಾತನಾಡಿದರು. ನಾವೆಲ್ಲರೂ ಪರಮಾತ್ಮನ ಮಕ್ಕಳಾಗಿದ್ದು, ನಮ್ಮ ಮನೆಯಾದ ಪರಮಧಾಮಕ್ಕೆ ತೆರಳುವ ಸಮಯ ಹತ್ತಿರ ಬಂದಿದೆ. ಅದಕ್ಕಾಗಿ ನಮ್ಮ ಮನಸ್ಸು ನಮ್ಮ ಆತ್ಮವನ್ನು ಶುದ್ಧವಾದ ವಿಚಾರಗಳಿಂದ ಪವಿತ್ರವಾಗಿಟ್ಟು ಕೊಳ್ಳಬೇಕು ಎಂದರು.
ನಿರಂಜನ ಅಕ್ಕ ಪರಿವಾರದ ಸಹೋದರ-ಸಹೋದರಿಯರಿಗೆ ತಿಲಕ, ಪನ್ನೀರು ಹಚ್ಚಿ ಶುಭಕೋರಿ ಶ್ರೀರಕ್ಷೆಯನ್ನು ಕಟ್ಟಿದರು. ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.