ಕವಿತಾಳ ಪಟ್ಟಣದ ಮುಖ್ಯರಸ್ತೆಯಲ್ಲಿ ಬಿಡಾಡಿ ದನಗಳು ಮಲಗಿರುವುದು.
- ಕವಿತಾಳ ಮುಖ್ಯರಸ್ತೆಯಲ್ಲಿ ತಿರುಗಾಟ
- ದನಗಳ ನಿಯಂತ್ರಿಸಬೇಕೆಂದು ಸ್ಥಳೀಯರ ಒತ್ತಾಯ
ಕವಿತಾಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಅಪಘಾತಗಳಿಗೆ ಕಾರಣವಾಗುತ್ತಿವೆ. ಕೂಡಲೇ ದನಗಳನ್ನು ನಿಯಂತ್ರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಿಂದ ಮಸ್ಕಿ ಕ್ರಾಸ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದೇ ರಸ್ತೆಯಲ್ಲಿ ದನಗಳು ತಿರುಗಾಡುತ್ತಿರುವುದರಿಂದ ಮತ್ತು ರಸ್ತೆ ಮೇಲೆಯೇ ಮಲಗುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಾಗಾಗಿ ದನಗಳನ್ನು ರಸ್ತೆಗೆ ಬಿಡದಿರಲು ಪಪಂಯಿಂದ ಜಾನುವಾರುಗಳ ಮಾಲೀಕರಿಗೆ ಸೂಚಿಸಲಾಗಿದೆ.
ಆದರೂ ಹಾವಳಿ ನಿಯಂತ್ರಣವಾಗಿಲ್ಲವೆಂದು ಸ್ಥಳೀಯರಾದ ಜಂಬಣ್ಣ, ಎಂ.ಡಿ.ಮೈಬುಸಾಬ್. ಅಮರೇಶ, ಮೌನೇಶ ಕೊಡ್ಲಿ ದೂರಿದರು. ಪಪಂ ಮುಖ್ಯಾಧಿಕಾರಿ ಜಸ್ಪಾಲ್ ಸಿಂಗ್ ಪ್ರತಿಕ್ರಿಯಿಸಿ, ಬಿಡಾಡಿ ದನಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಮುಂದುವರಿದರೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.