ಲಿಂಗಸುಗೂರು ಬಿಇಒ ಕಚೇರಿ ಪ್ರತಾಂಕಿತ ವ್ಯವಸ್ಥಾಪಕ ಅಮರೇಶ ಅಳ್ಳೊಳ್ಳಿಗೆ ಎಸ್‌ಎಫ್‌ಐ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಕಾರ್ಯದರ್ಶಿ ಚನ್ನಬಸವ ನಿಲೋಗಲ್, ಪ್ರಮುಖರಾದ ರಮೇಶ ಜೆ., ಮೌನೇಶ ಕಡ್ಡೋಣ, ಮಹಿಬೂಬ್ ಇತರರಿದ್ದರು.
- ಬಿಇಒ ಕಚೇರಿ ಅಧಿಕಾರಿಗೆ ಆಗ್ರಹ
- ಲಿಂಗಸುಗೂರು ಎಸ್‌ಎಫ್‌ಐ ತಾಲೂಕು ಘಟಕ ಮನವಿ
ಲಿಂಗಸುಗೂರು: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಡೆಗೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಬಿಇಒ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಅಮರೇಶ ಅಳ್ಳೊಳ್ಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಡೊನೇಷನ್ ಹಾಗೂ ಹೆಚ್ಚುವರಿ ಶುಲ್ಕವನ್ನು ಮನಬಂದಂತೆ ವಸೂಲಿ ಮಾಡುತ್ತಿವೆ. ಇದರಿಂದ ಬಡ, ಮಧ್ಯಮ, ಹಿಂದುಳಿದ, ದಲಿತ ಹಾಗೂ ಅಲ್ಪ ಸಂಖ್ಯಾತ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ (ಡೇರಾ) ರಚಿಸಿ ಡೊನೇಷನ್ ಹಾವಳಿ ತಡೆಯಬೇಕು.
ಅಕ್ರಮ ವಂತಿಗೆ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಖಾಸಗಿ ಶಾಲೆಗಳ ಶುಲ್ಕದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಹಾಗೂ ಅನಧಿಕೃತ ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚಬೇಕು. ಸರ್ಕಾರದ ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಬೇಕು. ಶಿಕ್ಷಣ ಸಂಸ್ಥೆಗಳು ಶಾಲಾ ಬ್ಯಾಗ್, ನೋಟ್‌ಬುಕ್, ಯುನಿಫಾರ್ಮ್ ಕಡ್ಡಾಯವಾಗಿ ಶಾಲೆಯಲ್ಲಿ ಖರೀದಿಸುವಂತೆ ಒತ್ತಡ ಹೇರುವುದನ್ನು ತಡೆಯಬೇಕೆಂದು ಆಗ್ರಹಿಸಿದರು.
ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಚನ್ನಬಸವ ನಿಲೋಗಲ್, ಪ್ರಮುಖರಾದ ರಮೇಶ ಜೆ., ಮೌನೇಶ ಕಡ್ಡೋಣ, ಮಹಿಬೂಬ್, ಮಹ್ಮದ್ ಅಲಿ ಇದ್ದರು.