ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಸನಬಿಡಿ ಬದುಕು ಗೆಲ್ಲಿ ಜಾಗೃತಿ ನಾಟಕ, ಜಾಥಾ ಕಾರ್ಯಕ್ರಮವನ್ನು ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್ ಉದ್ಘಾಟಿಸಿದರು. ಡಾ.ಸಂಜೀವರೆಡ್ಡಿ, ಡಾ.ನೀಲಕಂಠ, ಡಾ.ಶ್ರೀನಿಧಿ ಮನಗೂಳಿ ಇತರರಿದ್ದರು. 
ರಾಯಚೂರು

ವ್ಯಸನಿಗಳ ಸಹವಾಸದಿಂದ ದೂರವಿರಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಉಪನ್ಯಾಸಕ ಸೋಮಶೇಖರ ಬಳಗಾನೂರು ಹೇಳಿಕೆ
  • ವ್ಯಸನಬಿಡಿ ಬದುಕು ಗೆಲ್ಲಿ ಜಾಗೃತಿ
ಲಿಂಗಸುಗೂರು: ಇಳಕಲ್ ಚಿತ್ತರಗಿ ಮಠದ ಡಾ.ಮಹಾಂತ ಶಿವಯೋಗಿಗಳು ಜೋಳಿಗೆ ಹಿಡಿದು ದುಶ್ಚಟಗಳನ್ನು ಭಿಕ್ಷೆ ಬೇಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತಂದವರು ಎಂದು ನಿವೃತ್ತ ಉಪನ್ಯಾಸಕ ಸೋಮಶೇಖರ ಬಳಗಾನೂರು ಹೇಳಿದರು.
ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀ ಅದ್ವಿಕಾ ನರ್ಸಿಂಗ್ ಸ್ಕೂಲ್ ವಿದ್ಯಾರ್ಥಿಗಳು ಗುರುವಾರ ಹಮ್ಮಿಕೊಂಡಿದ್ದ ವ್ಯಸನಬಿಡಿ ಬದುಕು ಗೆಲ್ಲಿ ಜಾಗೃತಿ ನಾಟಕ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರದ ಭವಿಷ್ಯ ರೂಪಿಸಬೇಕಿರುವ ಯುವ ಸಮೂಹ, ವ್ಯಸನಿಗಳ ಸಹವಾಸದಿಂದ ದೂರವಿರಬೇಕು.
ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್, ಡಾ.ಸಂಜೀವರೆಡ್ಡಿ, ಡಾ.ನೀಲಕಂಠ, ಡಾ.ಶ್ರೀನಿಧಿ ಮನಗೂಳಿ, ಅಕ್ಕನಬಳಗದ ಅಧ್ಯಕ್ಷೆ ಚನ್ನಮ್ಮ ಸಕ್ರಿ, ಪ್ರಾಚಾರ್ಯೆ ಅಂಬಿಕಾ ವಟಗಲ್, ಸಂಯೋಜಕಿ ಮಂಜುಳಾ ಇದ್ದರು.