ಕಸಬಾ ಲಿಂಗಸುಗೂರಿನ ವರದೇಂದ್ರ ತೀರ್ಥರ ವೃಂದಾವನ.
ಲಿಂಗಸುಗೂರು: ಕಸಬಾ ಲಿಂಗಸುಗೂರಿನಲ್ಲಿ ಶ್ರೀ ವರದೇಂದ್ರ ತೀರ್ಥರ ಆರಾಧನಾ ಮಹೋತ್ಸವ ಜು.19 ರಿಂದ 21ರವರೆಗೆ ಜರುಗಲಿದೆ.
ಜು.19ರಂದು ಪೂರ್ವಾರಾಧನೆ ಪಲ್ಲಕ್ಕಿ ಸೇವೆ, ಸಂಜೆ ಮೈಸೂರು ರಾಮಚಂದ್ರಾಚಾರ್ಯ ಅವರಿಂದ ದಾಸವಾಣಿ, 20ರಂದು ಮಧ್ಯಾರಾಧನೆ ದಶಮಿ ದಿಂಡೋತ್ಸವ, ಸಂಜೆ ವಸುಪ್ರದಾ ಜೋಷಿ ಅವರಿಂದ ಶ್ರೀ ವರದೇಂದ್ರ ತೀರ್ಥರ ಕರುಣಾಮೃತಸಾರ ಹಾಗೂ 21ರಂದು ಉತ್ತರಾರಾಧನೆ ಮಹಾರಥೋತ್ಸವ ಜರುಗಲಿದೆ.
ಪ್ರಶಾಂತಾಚಾರ್ಯ ಆರ್.ರಾಚೊಳ್ಳಿ, ಉಡುಪಿ ಕೃಷ್ಣಾಚಾರ್ಯ, ಹನುಮೇಶ ಸುಳಾದಿ ಮಂತ್ರಾಲಯ, ಗುರುರಾಜ ದಾಸರು ಬೆಂಗಳೂರು, ಸಮೀರ ಆಚಾರ ಗಂಗಾವತಿ, ಶೇಷಾಚಾರ್ಯ ರಾಜಪುರೋಹಿತ ಬೆಂಗಳೂರು, ವಿಶ್ವಜೀತ್, ಮದವೇಶಾಚಾರ ರಾಜಪೂರೋಹಿತ ಬೆಂಗಳೂರು, ಕೃಷ್ಣಾಚಾರ ಗೋತಗಿ, ಗೋಪಾಲದಾಸ ಸಿರವಾರ ಇತರರು ಭಾಗವಹಿಸುವರು.
ಭಕ್ತರು ಪಾಲ್ಗೊಂಡು ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ವರದೇಂದ್ರ ತೀರ್ಥರ ಸ್ವಪ್ನ ಬೃಂದಾವನ ಸಮಿತಿಯ ಕಸಬಾ ಲಿಂಗಸುಗೂರು ಚಂದ್ರಕಾಂತದಾಸ ಅರ್ಚಕರು, ರಾಮರಾವ ದಾಸ, ತಿರುಮಲರಾವ ದಾಸ, ಶೇಷಗಿರಿದಾಸ ಅರ್ಚಕರು ತಿಳಿಸಿದ್ದಾರೆ.