ಸಿಂಧನೂರಿನ ಹಳೇ ಬಜಾರದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.  
ರಾಯಚೂರು

ಶ್ರೀ ಪ್ರಸನ್ನ ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ನರೇಶ್ ಕುಮಾರ್
ಸಿಂಧನೂರು: ನಗರದ ಹಳೇ ಬಜಾರನಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಹಾಗೂ ಶ್ರೀ ಆಂಜನೇಯ ಪ್ರಾಣ ಪ್ರತಿಷ್ಠಾಪನೆ ಶ್ರದ್ಧೆ-ಭಕ್ತಿಯಿಂದ ಜರುಗಿತು.
ಬೆಳಗ್ಗೆ ಹುಣಸಿಹೊಳೆ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು , ಮೂರುಮೈಲ್ ಕ್ಯಾಂಪಿನ ರಂಭಾಪುರಿ ಶಾಖಾ  ಮಠದ ಸೋಮನಾಥ ಶಿವಾಚಾರ್ಯರು, ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ಆಂಜನೇಯ ಸ್ವಾಮಿಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಹನುಮಂತ ಆಚಾರ್ ಬಾದರ್ಲಿ ನೇತೃತ್ವದಲ್ಲಿ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು. 
ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಸದಸ್ಯ ಖಾಜಿ ಮಲಿಕ್, ನಗರಸಭೆ ಮಾಜಿ ಸದಸ್ಯ ವೆಂಕಟರಾವ್ (ರಾಜು) ಬಂಡಿ, ಮುಖಂಡರಾದ ನರಸಿಂಹ ಆಚಾರ್ಯ ಪುರೋಹಿತ, ಛತ್ರಪ್ಪ ಕುರಕುಂದಿ, ಹಾರುನ್ ಪಾಷಾ ಜಾಗೀರದಾರ್, ವಿರುಪಣ್ಣ ಗುಡಿ, ಉಮೇಶ ಗೊಮರ್ಸಿ, ಯಲ್ಲಪ್ಪ ಸುರಪುರ ಇತರರಿದ್ದರು.