ರೌಡಕುಂದ ಗ್ರಾಮದಲ್ಲಿ ಶ್ರೀೀ ಲಕ್ಷ್ಮೀ ಬಂಡೆ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸಿಂಧನೂರು: ತಾಲೂಕಿನ ರೌಡಕುಂದ ಗ್ರಾಮದ ಶ್ರೀಲಕ್ಷ್ಮೀ ಬಂಡೆ ರಂಗನಾಥ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬ್ರಾಹ್ಮಿ ಮುಹೂರ್ತದಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು. ಸತ್ಯನಾರಾಯಣ ಪೂಜೆ, ಕಲ್ಯಾಣೋತ ್ಸವ, ಉಚ್ಚಾಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿ ಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಂಡೆ ರಂಗನಾಥಸ್ವಾಮಿ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ, ಬಿದರಳ್ಳಿ ಹನುಮೇಶ ಆಚಾರ್, ವೆಂಕಟರಾವ್ ವಟಗಲ್, ಅರುಣ್ ಕುಮಾರ್ ಕುಲಕರ್ಣಿ ಸಿರಗುಪ್ಪ, ಸುಧಾಕರ್ ರಾವ್ ಕುಲಕರ್ಣಿ ಬಳ್ಳಾರಿ, ಕರಿಯಪ್ಪ ಪೂಜಾರಿ ಹಾಗೂ ರೌಡಕುಂದ, ಸಾಸಲಮರಿ, ಸೋಮಲಾಪುರ, ಮಲ್ಕಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.