ಮುದಗಲ್‌ನಲ್ಲಿ ಎಸ್.ಎಸ್.ಟರ್ಫ್ ಕ್ರಿಕೆಟ್ ಮೈದಾನವನ್ನು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಉದ್ಘಾಟಿಸಿದರು.  
ರಾಯಚೂರು

ನಾಯಕತ್ವ ಗುಣ ಬೆಳೆಸುತ್ತದೆ ಕ್ರೀಡೆ

ಅಶೋಕ್ ಕುಮಾರ್ ಎನ್

ಮುದಗಲ್: ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಹೇಳಿದರು. ಕೆ.ಎಂ.ಬಡಾವಣೆಯಲ್ಲಿ ಎಸ್.ಎಸ್.ಟರ್ಫ್ ಕ್ರಿಕೆಟ್ ಮೈದಾನ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಕ್ರೀಡೆ ಯುವಜನರನ್ನು ದೈಹಿಕವಾಗಿ ಸದೃಢರನ್ನಾಗಿಸುವುದರೊಂದಿಗೆ ಶಿಸ್ತು, ತಂಡದ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಸಮಾನ ಆದ್ಯತೆ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಮುಖರಾದ ಸತೀಶ್ ಭೋವಿ, ಬಂದೇನವಾಜ್ ಬಡಿಗೇರ್, ಹುಸೇನ್ ಅಲಿ, ಸಾದಿಕ್ ಮೇಸ್ತ್ರಿ, ಸಾಜಿದ್ ಮೇಸ್ತ್ರಿ, ಮಹಮ್ಮದ್ ಅಲಿ ಕೋರಿ, ಚಾಂದ್ ಪಾಷಾ, ಶಾಲಂ ಟೇಲರ್, ಹುಸೇನ್ ಬಾಷಾ, ತುಕಾರಾಮ ಇಂಗ್ಲೆ, ಮನ್ಸೂರು ಬಿರಿಯಾನಿ, ಖಾಜಾ ಸ್ವೀಟ್, ಸಾಬೀರ್ ಇತರರಿದ್ದರು.