ಹುಸೇನಪ್ಪ ಅಮರಾಪುರ  
ರಾಯಚೂರು

ವಿಶೇಷ ಉಪನ್ಯಾಸ ಕಾರ್ಯಕ್ರಮ ಏ.28ರಂದು

ನರೇಶ್ ಕುಮಾರ್
ಸಿಂಧನೂರು: ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ನಿಮಿತ್ತ ಕಸಾಪ ತಾಲೂಕು ಘಟಕದ ಸಹಯೋಗದಲ್ಲಿ ಏ.28ರಂದು ನಗರದ ನೌಕರರ ಭವನದಲ್ಲಿ ವಿಶೇಷ ಉಪನ್ಯಾಸಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹನೀಯರ ವಿಚಾರಧಾರೆಗಳನ್ನು ಜನರಲ್ಲಿ ಬಿತ್ತಬೇಕೆಂಬ ಉದ್ದೇಶದೊಂದಿಗೆ ಬುದ್ಧಿಜೀವಿಗಳನ್ನೊಳಗೊಂಡಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಸಾಪ ತಾಲೂಕು ಅಧ್ಯಕ್ಷ ಎಚ್.ಎಫ್.ಮಸ್ಕಿ ಹಾಗೂ ದಲಿತ ಮುಖಂಡ ಆರ್.ಅಂಬ್ರೂಸ್ ಉದ್ಘಾಟಿಸುವರು. 
ಜಮಾಅತೆ ಸಂಘಟನೆ ತಾಲೂಕು ಅಧ್ಯಕ್ಷ ಹುಸೇನಸಾಬ್ ಭಾಗವಹಿಸುವರು. ಡಾ.ಅಂಬೇಡ್ಕರ್ ಕನಸಿನ ಭಾರತ ಕುರಿತು ಪ್ರಗತಿಪರ ಚಿಂತಕ ಚಂದ್ರಶೇಖರ ಗೊರೇಬಾಳ, ಡಾ.ಬಾಬೂಜಿ ಜನಪರ ಯೋಜನೆ ಕುರಿತು ಅಕ್ಕಮಹಾದೇವಿ ವಿವಿಯ ವಿಶೇಷ ಅಧಿಕಾರಿ ಪಿ.ಕಣ್ಣನ್ ಉಪನ್ಯಾಸ ನೀಡುವರು ಎಂದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಎಫ್.ಮಸ್ಕಿ, ದಸಾಪದ ಗೌರವ ಸಲಹೆಗಾರ ಮಂಜುನಾಥ ಗಾಂಧಿನಗರ, ದುರುಗಪ್ಪ ಗುಡದೂರು ಇದ್ದರು.