ಮಾನ್ವಿಯಿಂದ ಶ್ರೀಶೈಲ ಕ್ಷೇತ್ರಕ್ಕೆ ತೆರಳುವ ವಿಶೇಷ ಬಸ್ ಸೇವೆಗೆ ಘಟಕ ವ್ಯವಸ್ಥಾಪಕ ನಾಗರಾಜ ಚಾಲನೆ ನೀಡಿದರು. ಪ್ರಯಾಣಿಕರು ಇದ್ದರು. ಸಿಬ್ಬಂದಿ ಬಸಯ್ಯಸ್ವಾಮಿ, ಗುರುರಾಜ, ಶಂಕ್ರಪ್ಪ, ನಾಗರಾಜ ಇತರರಿದ್ದರು. 
ರಾಯಚೂರು

ಶ್ರೀಶೈಲಕ್ಕೆ ವಿಶೇಷ ಬಸ್ ಸೇವೆಗೆ ಚಾಲನೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಘಟಕ ವ್ಯವಸ್ಥಾಪಕ ನಾಗರಾಜ ಚಾಲನೆ
  • ಮಾನ್ವಿ ವಿಶೇಷ ಬಸ್ ಸೇವೆ
ಮಾನ್ವಿ: ಪಟ್ಟಣದಿಂದ ಶ್ರೀಶೈಲಕ್ಕೆ ಪ್ರಯಾಣಿಸುವ ಭಕ್ತರಿಗಾಗಿ ವಿಶೇಷ ಬಸ್ ಸೇವೆಗೆ ಇಲ್ಲಿನ ಸಾರಿಗೆ ಘಟಕ ವ್ಯವಸ್ಥಾಪಕ ನಾಗರಾಜ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಶ್ರೀಶೈಲ ಶ್ರೀಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಮಾ.10 ರಿಂದ 20ರವರೆಗೆ ಮಾನ್ವಿ ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಮುಂಗಡ ಕಾಯ್ದಿರಿಸಬಹುದು ಹಾಗೂ ಒಂದೇ ಗುಂಪಿನಲ್ಲಿ ಪ್ರಯಾಣಿಸುವ ಕನಿಷ್ಟ 45 ರಿಂದ 50 ಜನ ಪ್ರಯಾಣಿಕರಿದ್ದಲ್ಲಿ ಬಸ್ ಸೇವೆ ಒದಗಿಸಲಾಗುತ್ತಿದೆ.
ಯಾತ್ರಿಗಳು ಇಚ್ಚಿಸಿದಲ್ಲಿ ಪುಣ್ಯ ಕ್ಷೇತ್ರಗಳಾದ ಮಹಾನಂದಿ, ಮಂತ್ರಾಲಯ ಸೇರಿದಂತೆ ಇತರ ಯಾತ್ರಾ ಸ್ಥಳಗಳಿಗೆ ದರ್ಶನ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಮಾನ್ವಿ ಘಟಕಕ್ಕೆ ಸಂಪರ್ಕಿಸಲು ಕೋರಿದರು.