ಸಿಂಧನೂರು: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಕಟ್ಟಡದ ಬಾಡಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಸಾಮಗ್ರಿಗಳನ್ನು ಮಂಗಳವಾರ ಜಪ್ತಿ ಮಾಡಲಾಯಿತು.
ಹಾಸ್ಟೆಲ್ ಕಟ್ಟಡದ ಮಾಲೀಕ ಖಾಜಾಸಾಬ್‌ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಾಡಿಗೆ ಹಣ ಮತ್ತು ಬಡ್ಡಿ ಸೇರಿ 20 ಲಕ್ಷ ರೂ. ಪಾವತಿಸಬೇಕಿದೆ. ಈಗಾಗಲೇ ಒಂದು ಸಾರಿ ಸಾಮಗ್ರಿ ಜಪ್ತಿ ಮಾಡಲಾಗಿದ್ದು, 12 ಲಕ್ಷ ಪಾವತಿ ಮಾಡಿ ಬಾಕಿ ಎಂಟು ಲಕ್ಷ ರೂ.ಗಾಗಿ ಎರಡು ತಿಂಗಳು ಅವಕಾಶ ನೀಡುವಂತೆ ಇಲಾಖೆಯಿಂದ ಕೇಳಲಾಗಿತ್ತು. ಕಾಲಾವಕಾಶ ಮುಗಿದರೂ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಮತ್ತೊಮ್ಮೆ ಸಮಾಜ ಕಲ್ಯಾಣ ಇಲಾಖೆ ಸಾಮಗ್ರಿಗಳನ್ನು ಜಪ್ತಿ ಮಾಡುವಂತೆ ನೋಟಿಸ್ ನೀಡಿತ್ತು.