ನಾಗರಾಜ  
ರಾಯಚೂರು

ಸಿದ್ಧರಾಮಾನಂದ ಶ್ರೀಗಳ ಪುಣ್ಯರಾಧನೆ ಭಾನುವಾರ

ನರೇಶ್ ಕುಮಾರ್
ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ ಕಲಬುರಗಿ ವಿಭಾಗೀಯ ಕನಕಗುರುಪೀಠದ ಸಿದ್ಧರಾಮಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ಫೆ.1ರಂದು ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಕುರುಬ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮಠದ 150ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಸಚಿವರಾದ ಸತೀಶ ಜಾರಕಿಹೊಳಿ, ಡಾ.ಶರಣಪ್ರಕಾಶ ಪಾಟೀಲ್, ಬೈರತಿ ಸುರೇಶ, ಎಚ್.ಸಿ. ಮಹಾದೇವಪ್ಪ, ಎನ್.ಎಸ್.ಬೋಸರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 
ಸಿದ್ಧರಾಮಾನಂದ ಸ್ವಾಮೀಜಿ ನಿಧನ ಕಲ್ಯಾಣ ಕರ್ನಾಟಕ ಭಾಗದ ಹಾಲುಮತ ಹಾಗೂ ತಳ ಸಮಾಜ ಅನಾಥವಾಗುವಂತೆ ಮಾಡಿದೆ. 15 ವರ್ಷಗಳಿಂದ ಅವರು ಮಾಡಿಕೊಂಡು ಬಂದಿದ್ದ ಹಲವು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವ ಬಗ್ಗೆ ಹಾಗೂ ಸಮಾಜದ ವಿವಿಧ ಕಾರ್ಯಕ್ರಮಗಳ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಚಿಂತನ ಮಂಥನ ಸಭೆ ಜರುಗಲಿದೆ.
ಹೀಗಾಗಿ ತಾಲೂಕು ಸೇರಿ ಜಿಲ್ಲೆಯ ಎಲ್ಲ ಕುರುಬ ಸಮಾಜದ ಮುಖಂಡರು, ತಳಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು. ಪ್ರಮುಖರಾದ ಗೋವಿಂರಾಜ ಚಿಂಚೋಡಿ, ಮಲ್ಲಿಕಾರ್ಜುನ್ ಜಂಬಲದಿನ್ನಿ, ಮಲ್ಲಣ್ಣ ಗದ್ವಾಲ್ ಸಾಹುಕಾರ, ಅಯ್ಯಣ್ಣ, ಭಾಗಣ್ಣ ನಿಲವಂಜಿ, ನರಸಣ್ಣ ನಿಲವಂಜಿ, ನರಸಣ್ಣ ಗಾಣದಾಳ ಇದ್ದರು.