ದೇವದುರ್ಗದ ತಾಲೂಕು ಆಡಳಿತ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡಲಾಯಿತು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಶಿರಸ್ತೇದಾರ್ ಭೀಮರಾಯ ಮೇಟಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಮಸರಕಲ್, ಶಿವರಾಜ್ ಗೆಜ್ಜೆಬಾಯಿ, ಮಾರೆಪ್ಪ ಇದ್ದರು. 
ರಾಯಚೂರು

ವಚನ ಸಾಹಿತ್ಯಕ್ಕೆ ಸಿದ್ದರಾಮೇಶ್ವರ ಕೊಡುಗೆ ಅಪಾರ

ದೇವದುರ್ಗ: ಶಿವಯೋಗಿ ಸಿದ್ದರಾಮೇಶ್ವರ ಶರಣರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾದರಿ ಎನಿಸಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಸಿದ್ದರಾಮೇಶ್ವರ ಅವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದರು. ವೀರಶೈವ ಪರಂಪರೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಅವರು ಅಪಾರ ನಂಬಿಕೆ, ಭಕ್ತಿ ಹೊಂದಿದ್ದರು. ಕಾಯಕ ಮತ್ತು ಭಕ್ತಿ ಮಾರ್ಗದಲ್ಲಿ ನಂಬಿಕೆ ಇಟ್ಟು ಬದುಕಬೇಕು. ಕಾಯಕ, ದಾಸೋಹ, ಲಿಂಗ ಪೂಜೆ ಬಗ್ಗೆ ವಚನ ರಚಿಸಿದ್ದಾರೆ. ಶಿವಯೋಗಿ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತನಾಮದಲ್ಲಿ 1162ಕ್ಕೂ ಹೆಚ್ಚು ವಚನಗಳನ್ನು ರಚಿಸಿ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಶಿರಸ್ತೇದಾರ್ ಭೀಮರಾಯ ಮೇಟಿ, ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ದೇವರೆಡ್ಡಿ, ಪ್ರವೀಣ್ ಕುಮಾರ್ ಯಡ್ರಾಮಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಮಸರಕಲ್, ಗೌರವಾಧ್ಯಕ್ಷ ಶಿವರಾಜ್ ಗೆಜ್ಜೆಬಾಯಿ, ಮಾರೆಪ್ಪ, ಅಮರೇಶ್, ಸಂತೋಷ್, ನಾಗರಾಜ್, ಹನುಮಂತ ಕಟ್ಟಿಮನಿ, ಭೀಮಣ್ಣ ಇತರರಿದ್ದರು.