ದೇವದುರ್ಗದಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಶಿವಕುಮಾರ ಸ್ವಾಮೀಜಿ ಅಭಿಮಾನಿ ಬಳಗದ ಸಂಚಾಲಕ ಮಲ್ಲಯ್ಯಸ್ವಾಮಿ ಅಂಜಳಮಠ, ಪ್ರಮುಖರಾದ ಶೀಖರೇಶ ಪಾಟೀಲ್, ಬಸವರಾಜ ಸ್ವಾಮಿ ಯರಮಸಾಳ, ರಂಗಣ್ಣ ಪಾಟೀಲ್ ಅಳ್ಳುಂಡಿ, ಚಂದ್ರಶೇಖರ ಪಾಟೀಲ್ ಮಿಯ್ಯಪುರ, ಶರಣಬಸವ ಕುಲಕರ್ಣಿ, ಆನಂದ ತಾತ ಇತರರಿದ್ದರು.
ದೇವದುರ್ಗ: ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದ ಕೀರ್ತಿ ಶ್ರೀ ಸಿದ್ಧಗಂಗಾಮಠದ ದಿ.ಶಿವಕುಮಾರ ಸ್ವಾಮೀಜಿಗೆ ಸಲ್ಲಿಸುತ್ತದೆ. ಶ್ರೀಗಳ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ದಾರಿದೀಪವಾಗಿದೆ ಎಂದು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅಭಿಮಾನಿ ಬಳಗದ ಸಂಚಾಲಕ ವೇದಮೂರ್ತಿ ಮಲ್ಲಯ್ಯಸ್ವಾಮಿ ಅಂಜಳಮಠ ಹೇಳಿದರು.
ಪಟ್ಟಣದ ಕೆಇಬಿ ರಸ್ತೆಯ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಆಯೋಜಿಸಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಮಸ್ಮರಣೆ ಕಾರ್ಯಕ್ರಮದ ನೇತೃತ್ವವಹಿಸಿ ಬುಧವಾರ ಮಾತನಾಡಿದರು.
ಕಾಯಕ, ದಾಸೋಹ, ಭಕ್ತಿ ಮೂಲಕ ನಾಡಿನಲ್ಲಿ ಮನೆಮಾತಾಗಿದ್ದರು. ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯದೈವಾಗಿದ್ದು ವಿವಿಧ ಸಮಾಜಮುಖಿ ಕೆಲಸದಿಂದ ನಡೆದಾಡುವ ದೇವರು ಎನ್ನುವ ಖ್ಯಾತಿ ಪಡೆದಿದ್ದರು. ಬಸವಣ್ಣ ಅವರ ಆದರ್ಶವಾಗಿಟ್ಟುಕೊಂಡು ನಾಡಿಗೆ ತ್ರಿವಿಧ ದಾಸೋಹ ನೀಡಿದ್ದರು. ಅವರು ಹಾಕಿಕೊಟ್ಟ ಪರಂಪರೆಯಲ್ಲಿ ಶ್ರೀಮಠ ಸಾಗುತ್ತಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶೀಖರೇಶ ಪಾಟೀಲ್, ಪ್ರಮುಖರಾದ ಬಸವರಾಜ ಸ್ವಾಮಿ ಯರಮಸಾಳ, ರಂಗಣ್ಣ ಪಾಟೀಲ್ ಅಳ್ಳುಂಡಿ, ಚಂದ್ರಶೇಖರ ಪಾಟೀಲ್ ಮಿಯ್ಯಪುರ, ಶರಣಬಸವ ಕುಲಕರ್ಣಿ, ಆನಂದ ತಾತ, ಮುತ್ತುರಾಜ್, ರಾಘಯ್ಯ ಅಬಕಾರಿ, ಬೂದಯ್ಯಸ್ವಾಮಿ, ಶರಣಗೌಡ ಅರಶಿಣಗಿ, ಅನಿಲ್ ಪರ್ತಾಪುರ, ಯಲ್ಲಪ್ಪ ಗೌಳಿ, ಅಮರೇಶ ಗೌಳಿ, ಆದೆಪ್ಪ ಕುಂಬಾರ, ಹನುಂತ್ರಾಯ ಮೂಲಿಮನಿ, ಶಿವರಾಜ, ಮಹಾದೇವ ಪಾಟೀಲ್, ನಾಗರಾಜ ಪಾಟೀಲ್, ಶರಣು ರಾಮದುರ್ಗ, ವೆಂಕಟೇಶ ಸೋಮಕಾರ್ ಇದ್ದರು.