ರಾಯಚೂರಿನ ಹೋಟೆಲ್‌ನಲ್ಲಿ ಸೌದೆ ಬಳಕೆ ಮಾಡಿರುವುದು.
- ದೊಸೆ,ಪೂರಿ ಬಂದ್ -ವ್ಯಾಪಾರಕ್ಕೆ ಹೊಡೆತ
- ಸೌದೆ ಒಲೆಗೆ ಮುಂದು
- ವ್ಯಾಪಾರಕ್ಕೆ ಪೆಟ್ಟು
ಬಿಸಿಲನಾಡು ರಾಯಚೂರು ಜಿಲ್ಲಾಧ್ಯಂತ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸಮಸ್ಯೆಯಿಂದ ಹೋಟೆಲ್‌ಗಳಲ್ಲಿ ದೋಸೆ, ಪಕೋಡಾ, ಪೂರಿ, ಗೋಬಿ ಸೇರಿದಂತೆ ಅನೇಕ ತಿನ್ನಿಸುಗಳಿಗೆ ಬ್ರೇಕ್ ಹಾಕಬೇಕಾದ ಸ್ಥಿತಿ ಎದುರಾಗಿದೆ. ಜತೆಗೆ ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯವಾಗಿ ಸೌದೆ ಒಲೆ ಬಳಕೆಗೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಇರಾನ್- ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶದಿಂದ ವಾಣಿಜ್ಯ ಅಡಿಗೆ ಅನಿಲದ ಸಿಲಿಂಡರ್ ಪೂರೈಕೆಯನ್ನು ವ್ಯತ್ಯಯವಾಗಿದೆ. ಇದರಿಂದ ಹೋಟೆಲ್‌ಗಳಿಗೆ ಪೂರೈಕೆ ಆಗುತ್ತಿದ್ದ ವಾಣಿಜ್ಯ ಬಳಕೆ ಸಿಲಿಂಡ್ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರ ಪರಿಣಾಮವಾಗಿ ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಈಗಾಗಲೇ ದೋಸೆ,ಉದ್ದಿನ ಒಡೆ, ಬಜ್ಜಿ ಸೇರಿದಂತೆ ಮೊದಲಾದ ತಿನ್ನಿಸುಗಳನ್ನು ನಿಲ್ಲಿಸಲಾಗಿದೆ. ಮತ್ತೆ ಕೆಲವು ಹೋಟೆಲ್‌ಗಳಲ್ಲಿ ಇಡೀ ದಿನ ಪೂರೈಕೆ ಮಾಡುತ್ತಿದ್ದ ದೋಸೆ ಅಂತಹ ತಿನ್ನಿಸುಗಳನ್ನು ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 4 ರಿಂದ 8 ಅವಧಿಗೆ ಸೀಮಿತಗೊಳಿಸಲಾಗಿದೆ. ಉಳಿದಂತೆ ರೈಸ್, ಉಪ್ಪಿಟ್ಟಿ ನಂತಹ ಒಂದು ಬಾರಿ ಮಾತ್ರ ಬೇಯಿಸುವ ಪದಾರ್ಥಗಳನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಆ ಪದಾರ್ಥಗಳು ಖಾಲಿಯಾದ ತಕ್ಷಣ ಮುಕ್ತಾಯಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.
ಸೌದೆ ಒಲೆ ಖರೀದಿಗ್ಯಾಸ್ ಸಿಲಿಂಡರ್ ಕೊರೆತೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಹೋಟೆಲ್ ಮಾಲೀಕರು ಸೌದೆ ಒಲೆ ಮೂಲಕ ಕೆಲವು ಆಹಾರಗಳನ್ನು ತಯಾರು ಮಾಡುತ್ತಿದ್ದಾರೆ. ಇಲ್ಲಿನ ಜನತಾ ಹೋಟೆಲ್, ದಾವಣಗೆರೆ ಬೆಣ್ಣೆ ದೋಸೆ , ವಿಷ್ಣು ಸಾಗರ ಸೇರಿದಂತೆ ಹಲವು ಕಡೆಗಳಲ್ಲಿ ಅಡುಗೆ ತಯಾರಿಸಲು ಗ್ಯಾಸ್ ಬದಲಾಗಿ ಭತ್ತದ ತೌಡು ಹಾಗೂ ಹೊಟ್ಟು ಬಳಸಲಾಗುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವೇ ಹೊರತು ಸುಸ್ಥಿರವಲ್ಲ ಎಂಬಂತೆಯಾಗಿದೆ.
ಗ್ಯಾಸ್ ಒಲೆಗಳ ವೇಗಕ್ಕೆ ಹೊಂದಿಕೊಂಡಿರುವ ಅಡುಗೆ ಸಿಬ್ಬಂದಿಗೆ ಗ್ಯಾಸ್‌ನಿಂದ ಕೆಲಸ ಮಾಡುವುದು ಸವಾಲಾಗಿದೆ. ಟೀ, ಕಾಫಿ, ಪೂರಿ ಹಾಗೂ ದೋಸೆಯಂತಹ ತಿಂಡಿಗಳನ್ನು ಸೌದೆ ಒಲೆಯ ಮೇಲೆ ಸಿದ್ಧಪಡಿಸುವುದು ಅಸಾಧ್ಯವಾಗಿದೆ. ಈಗಾಗಲೇ ಹಲವು ಹೋಟೆಲ್‌ಗಳಲ್ಲಿ ಪೂರಿ ತಯಾರಿಸುವುದನ್ನು ನಿಲ್ಲಿಸಲಾಗಿದೆ. ಅನಿಲ ಪೂರೈಕೆ ಹೀಗೆಯೇ ಮುಂದುವರೆದರೆ ಕಾಫಿ-ಟೀ ಕೂಡ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಈಗಾಗಲೇ ಸಿಲಿಂಡರ್ ಸಮಸ್ಯೆಯಿಂದ ಶೇ.70 ರಷ್ಟು ಅಡುಗೆ ತಯಾರಿಕೆಯನ್ನೇ ಹೋಟೆಲ್ ಮಾಲೀಕರು ನಿಲ್ಲಿಸಿದ್ದಾರೆ.ಅಡುಗೆ ಎಣ್ಣೆಯ ಬೆಲೆಯೂ ಹೆಚ್ಚಳವಾಗಿದ್ದು ದೋಸೆ, ಪೂರಿ ಸೇರಿದಂತೆ ಹೆಚ್ಚು ಗ್ಯಾಸ್ ಸಿಲಿಂಡರ್ ಬಳಸುವ ಆಹಾರ ಪದಾರ್ಥಗಳನ್ನ ತಯಾರಿಸುತ್ತಿಲ್ಲ. ಇಡ್ಲಿ ಹಾಗೂ ರೈಸ್ ಪದಾರ್ಥಗಳನ್ನ ಸ್ಟೀಮ್ ಹಾಗೂ ಸೌದೆ ಒಲೆಯ ಮುಖಾಂತರ ತಯಾರಿಸುತ್ತಿದ್ದಾರೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿದ್ದು, ಕೇಲವರು ಹೋಟೆಲ್‌ಅಸೋಸಿಯೇಷನ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇಲವರು ಮಾಡಿಕೊಂಡಿಲ್ಲ. ಆದರೆ ಈ ವಾಣಿಜ್ಯ ಅನಿಲದ ಅಭಾವದಿಂದ ಶೇ.70ರಷ್ಟು ವ್ಯಾಪಾರಕ್ಕೆ ಹೊಡೆತ ಬಿದ್ದಿದ್ದೆ. ಗ್ಯಾಸ್ ಸಿಲಿಂಡರ್ ಈಗಾಗಲೇ ಬುಕ್ ಮಾಡಿದ್ದರೂ ಸಿಲಿಂಡರ್ ಸರಬರಾಜು ಆಗುತ್ತಿಲ್ಲ, ಇನ್ನೊಂದೆರಡು ದಿನ ಕಳೆದರೆ ತೀವ್ರ ಸಮಸ್ಯೆ ಎದುರಾಗುತ್ತೆ. ಸೌದೆಯೂ ಸಿಗದಿದ್ದರೆ ಹೋಟೆಲ್ ಬಂದ್ ಮಾಡಬೇಕಾಗುತ್ತದೆಂದು ಹೋಟೆಲ್ ಮಾಲೀಕರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಒಂದು ಖಾಸಗಿ ಕಂಪನಿ ಸೇರಿ ಒಟ್ಟು 24 ಅಡುಗೆ ಅನಿಲ ವಿತರಕ ಏಜೆನ್ಸಿಗಳು ಇದ್ದು, ಈ ಪೈಕಿ 6 ಭಾರತ ಗ್ಯಾಸ್, 7 ಹಿಂದೂಸ್ಥಾನ ಗ್ಯಾಸ್ ಮತ್ತು 10 ಇಂಡಿಯನ್ ಗ್ಯಾಸ್ ಏಜೆನ್ಸಿಗಳು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿವೆ. ಗೃಹ ಬಳಕೆಯ 14.2 ಕೆಜಿಯ ಸಿಲಿಂಡರ್ 2670 ಇದ್ದು, ಈ ಪೈಕಿ ಎಚ್‌ಪಿಸಿಎಲ್ 670, ಡಿಪಿಸಿ 2647, ಐಒಸಿ 5647 ಹಾಗೂ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬಿಪಿಸಿ 526, ಐಒಸಿ 517 ಸೇರಿ ಒಟ್ಟು 11,647 ಸಿಲಿಂಡರ್ ಲಭ್ಯವಿದೆಂದು ಆಹಾರ ಮತ್ತು ನಾಗರಿಕ ಸೊರಬರಾಜು ಇಲಾಖೆ ಮಾಹಿತಿ ನೀಡಿದೆ.
ಕಳೆದ ಒಂದು ವಾರದಿಂದ ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದ ಹೋಟೆಲ್‌ನಲ್ಲಿ ದೊಸೆ, ಪೂರಿ ಸೇರಿ ಅನೇಕ ತಿಂಡಿಗಳನ್ನು ಬಂದ್ ಮಾಡಿ ಸೌದೆ ಹಾಗೂ ಸ್ಟಿಂನಿಂದ ರೈಸ್ ಹಾಗೂ ಇಡ್ಲಿಯನ್ನು ತಯಾರು ಮಾಡುತ್ತಿದ್ದೇವೆ. ಕಟ್ಟಿಗೆ ಅಥವಾ ತೌಡಿನ ಒಲೆಗಳನ್ನು ದೀರ್ಘಕಾಲದವರೆಗೆ ಬಳಸಲು ಸಾಧ್ಯವಿಲ್ಲ. ಇದರಿಂದ ಕೆಲಸದ ವೇಗ ಕಡಿಮೆಯಾಗುವುದಲ್ಲದೆ, ಗ್ರಾಹಕರಿಗೆ ಸಕಾಲದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
ಪ್ರಧಾನ್ ಹೋಟೆಲ್ ಮಾಲೀಕರು ರಾಯಚೂರು
ಇರಾನ್- ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶದಿಂದ ಕೇವಲ ವಾಣಿಜ್ಯ ಅಡಿಗೆ ಅನಿಲದ ಸಿಲಿಂಡರ್ ಪೂರೈಕೆಯಲ್ಲಿ ಮಾತ್ರ ವ್ಯತ್ಯಯವಾಗಿದೆ. ಅದರೆ ಗೃಹ ಬಳಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನಮ್ಮಲ್ಲಿ ದಿನಕ್ಕೆ 6 ರಿಂದ 8 ಸಾವಿರ ಸಿಲಿಂಡರ್ ಬೇಕಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಅನಿಲ ಬರುತ್ತಿರುವುದರಿಂದ ಸಮಸ್ಯೆ ಎದುರಾಗಿದೆ.
ನಜೀರ್ ಅಹ್ಮದ್ ಉಪ ನಿರ್ದೇಶಕ ಆಹಾರ ಇಲಾಖೆ ರಾಯಚೂರು