ಹುಲಿಗೇಪ್ಪ ಮಾಣಿಕ್ಯ 
ರಾಯಚೂರು

ಆ.28 ರಂದು ಶೀ ನೂಲಿ ಚಂದಯ್ಯನವರ ಜಯಂತಿ ಆಚರಣೆ

ರಾಯಚೂರು

ಜಿಲ್ಲಾಡಳಿತ ಹಾಗೂ ಕುಳುವ ಸಮಾಜದಿಂದ ಕಾಯಕಯೋಗಿ ಶೀ ನೂಲಿ ಚಂದಯ್ಯನವರ ಜಯಂತಿಯನ್ನು ಆ.28 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆಂದು ಜಿಲ್ಲಾ ಕುಳುವ ಮಹಾ ಸಂಘದ ಗೌರವಾಧ್ಯಕ್ಷ ಹುಲಿಗೇಪ್ಪ ಮಾಣಿಕ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಟಿಪ್ಪು ಸುಲ್ತಾನ ಉದ್ಯಾನವನದಿಂದ ಶ್ರೀನೂಲಿ ಚಂದಯ್ಯನವರ ಭಾವಚಿತ್ರ ಮೆರವಣಿಗೆ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರಕ್ಕೆ ಆಗಮಿಸಲಿದೆ. ಕಾರ್ಯಕ್ರಮದಲ್ಲಿ ಕುಳುವ ಸಮಾಜದ ಅಧ್ಯಕ್ಷ ಶಿವಾನಂದ ಭಜಂತ್ರಿ, ಮಾಜಿ ಶಾಸಕ ಜಿ.ಚಂದ್ರಣ್ಣ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಲ್ಲವಿ, ಪ್ರಮುಖರದಾ ರಾಮಪ್ಪ ಹಾಗೂ ಹುಬ್ಬಳ್ಳಿಯ ಶಶಿ ಬಿಜವಾಡ ಸೇರಿದಂತೆ ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಮಂಗರಾಯ,ಪ್ರಮುಖರಾದ ಈರಣ್ಣ ಸತ್ಪಾಡಿ, ಬೂದೆಪ್ಪ , ನರಸಿಂಹಲು, ಮಹಾದೇವ, ಮಾಲಾ ಭಜಂತ್ರಿ ಇದ್ದರು.