ಮಸ್ಕಿ ಬಾಲಕರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಸ್ಕಿ ಬಿ-ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಚಾಲನೆ ನೀಡಿದರು.
ಮಸ್ಕಿ: ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಗೆಲುವಿಗಾಗಿ ಶ್ರಮಿಸಬೇಕು ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಹೇಳಿದರು.
ಬಾಲಕರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಸ್ಕಿ ಬಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆಗೂ ಮಹತವ ನೀಡಬೇಕು. ಕಠಿಣ ಪರಿಶ್ರಮದಿಂದ ಕ್ರೀಡೆ ಹಾಗೂ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಭ್ರಮರಾಂಬ ಸಹಕಾರಿ ಸಂಘದ ಅಧ್ಯಕ್ಷ ಪಂಪಣ್ಣ ಗುಂಡಳ್ಳಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಮಾನಸಿಕ, ಶಾರೀರಕ ಸದೃಢತೆಗೆ ಸಹಕಾರಿಯಾಗಲಿವೆ ಎಂದರು. ಸಿಆರ್‌ಪಿ ರಾಮಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ, ಪುರಸಭೆ ಸದಸ್ಯರಾದ ದೊಡ್ಡಕರಿಯಪ್ಪ, ಮಲ್ಲಿಕಾರ್ಜುನ ಬ್ಯಾಳಿ, ಭರತಕುಮಾರ, ಜಿ.ವೆಂಕಟೇಶ ನಾಯಕ, ಮಸೂದ್ ಪಾಷಾ, ಸಂತೋಷ ಪತ್ತಾರ, ಬಸವರಾಜ ಬುಕ್ಕಣ್ಣ, ನೂರ್ ಅಹ್ಮದ್, ಬಸವರಾಜ, ಸುನೀತಾ ಇತರರಿದ್ದರು.