ಸಿಂಧನೂರಿನ ಸುಕಾಲಪೇಟೆಯಲ್ಲಿ ಒಳಚರಂಡಿ ಹಾಗೂ ಬಾಕಿ ಕಾಮಗಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ಸ್ಥಳೀಯ ಕನಕ ಗುರುಪೀಠದ ಪೀಠಾಧಿಪತಿ ಸಿದ್ದರಾಮಯ್ಯ ಗುರುವಿನ್, ನಗರಸಭೆ ಪೌರಾಯುಕ್ತ ಪಾಂಡುರಂಗ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ದಡೇಸುಗೂರು, ವೈ.ಅನಿಲ್‌ಕುಮಾರ ಇದ್ದರು. 
ರಾಯಚೂರು

11 ತಿಂಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
  • ಸಿಂಧನೂರು ಕಾಮಗಾರಿಗಳಿಗೆ ಚಾಲನೆ
ಸಿಂಧನೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಭರಪೂರ ಅನುದಾನ ನೀಡಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ 28ನೇ ವಾರ್ಡ್ ಸುಕಾಲಪೇಟೆಯಲ್ಲಿ ಕೆಯುಐಡಿಎಫ್‌ಸಿಯಿಂದ 20 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಬಾಕಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. 2016ರಲ್ಲಿ ಸಿಂಧನೂರಿಗೆ ಒಳಚರಂಡಿ ಯೋಜನೆ ಜಾರಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಒಳಚರಂಡಿ, ನಿರಂತರ ಕುಡಿವ ನೀರಿನ ಯೋಜನೆ, ರಸ್ತೆ, ಚರಂಡಿಗಳ ನಿರ್ಮಾಣಕ್ಕೆ 300-400 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.
ಹಿಂದೆ ಒಳಚರಂಡಿ ಯೋಜನೆ ಆರಂಭಿಸಿದಾಗ ನೀಲಿನಕ್ಷೆಯಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಮನೆಗಳ ಸಂಪರ್ಕ ಮಾತ್ರ ಫಲಾನುಭವಿಗಳೇ ಮಾಡಿಕೊಳ್ಳಬೇಕಿತ್ತು. ನಗರದ 13 ಸಾವಿರ ಮನೆಗಳಲ್ಲಿ 2 ಸಾವಿರ ಮನೆಗಳು ಮಾತ್ರ ಯುಜಿಡಿ ಸಂಪರ್ಕ ಹೊಂದಿದ್ದವು. ಉಳಿದ 11 ಸಾವಿರ ಮನೆಗಳಿಗೆ ಸಂಪರ್ಕವಿರಲಿಲ್ಲ. ಈಗ 11 ಸಾವಿರ ಮನೆಗಳಿಗೂ ಸಂಪರ್ಕ ಕಲ್ಪಿಸಲಾಗುವುದು. 7 ಕಿಮೀ ಮಿಸ್ಸಿಂಗ್ ಲೈನ್, 1.9 ಕಿಮೀ ಲಿಂಕ್ ಸಂಪರ್ಕದ ಜತೆಗೆ 293 ಮ್ಯಾನುವೆಲ್ ರಿಪೇರಿ ಕಾಮಗಾರಿ ಇದರಲ್ಲಿ ಅಳವಡಿಸಲಾಗಿದೆ. 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಯಶಸ್ವಿಯಾಗಲು ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಎಂದರು.
ಸ್ಥಳೀಯ ಕನಕ ಗುರುಪೀಠದ ಪೀಠಾಧಿಪತಿ ಸಿದ್ದರಾಮಯ್ಯ ಗುರುವಿನ್, ನಗರಸಭೆ ಪೌರಾಯುಕ್ತ ಪಾಂಡುರಂಗ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ದಢೇಸುಗೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೈ.ಅನಿಲ್‌ಕುಮಾರ, ಪ್ರಮುಖರಾದ ಪ್ರಭುರಾಜ, ಅಶೋಕ ಉಮಲೂಟಿ, ದುರುಗಪ್ಪ ಕಟಾಲಿ, ಸಣ್ಣ ತಿಮ್ಮಯ್ಯ, ಹನುಮೇಶ ನಾಯಕ, ಛತ್ರಪ್ಪ ಕುರಕುಂದಿ, ಶರಣಪ್ಪ ಉಪ್ಪಲದೊಡ್ಡಿ, ಮುರ್ತುಜಾ ಹುಸೇನ್, ನಗರಸಭೆ ಎಇಇ ಮಹಾದೇವ, ಎಇ ಪ್ರವೀಣಕುಮಾರ ಇತರರಿದ್ದರು.