ಗುರುಗುಂಟಾದಲ್ಲಿ ಶುಕ್ರವಾರದ ಸಂತೆಗೆ ಚರಂಡಿ ನೀರು ಹರಿದಿರುವುದು. 
ರಾಯಚೂರು

ವಾರದ ಸಂತೆಗೆ ನುಗ್ಗಿದ ಚರಂಡಿ ನೀರು

ಗುರುಗುಂಟಾ: ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಏಕಾಏಕಿ ಚರಂಡಿ ನೀರು ವಾರದ ಸಂತೆಗೆ ನುಗ್ಗಿದ್ದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ತೊಂದರೆ ಅನುಭವಿಸಿದರು. 
ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕೆರೆ ಇದೆ. ಮಳೆ ಮತ್ತು ನಾರಾಯಣಪುರ ಬಲದಂಡೆ ನಾಲೆಯ ಹೆಚ್ಚಾದ ನೀರು ಸಂಗ್ರಹವಾಗುತ್ತದೆ. ಕೆರೆ ತುಂಬಿದಾಗ ತೂಬುಗಳನ್ನು ತೆರೆದು ಹೊರ ಬಿಡಲಾಗುತ್ತದೆ. 
ಆ ನೀರು ಗ್ರಾಮದೊಳಗೆ ಹರಿದು ದಂಡಂ ಕೆರೆಗೆ ಸೇರುತ್ತದೆ. ಹರಿಯುವ ಮಾರ್ಗ ಮಧ್ಯದಲ್ಲಿನ ಚಿಕ್ಕದಾದ ಚರಂಡಿ ಹೂಳು ತುಂಬಿದ್ದರಿಂದ ಹಾಗೂ ಭೂಕೆಳಮೈ ಹಾಕಲಾದ ಸಿಮೆಂಟ್ ಪೈಪ್‌ಗಳು ಕಸಕಡ್ಡಿಗಳಿಂದ ಭರ್ತಿಯಾಗಿದ್ದರಿಂದ ಕೊಳಚೆ ನೀರು ವಾರದ ಸಂತೆಗೆ ಹರಿಯಿತು. 
ಇದರಿಂದ ವ್ಯಾಪಾರಕ್ಕೆಂದು ಬಂದ ವ್ಯಾಪಾರಿಗಳು ಹಾಗೂ ವಿವಿಧ ಗ್ರಾಮದ ಜನರು ಪರದಾಡಿದರು. ಚರಂಡಿ ಹೂಳು ತೆರವಿಗೆ ಗ್ರಾಪಂ ಮುಂದಾಗಬೇಕು ಎಂದು ಒತ್ತಾಯಿಸಿದರು. 
"

ಜನರು ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಅದು ಕೊಳಚೆ ನೀರು ಹರಿಯುವ ಪೈಪ್‌ಗಳ ಸೇರಿ ಬ್ಲಾಕ್ ಆಗುತ್ತದೆ. ಇದರಿಂದ ಸಮಸ್ಯೆಯಾಗಿದೆ. ಜನರು ಗುರುತಿಸಿದ ಸ್ಥಳ ಹಾಗೂ ತ್ಯಾಜ್ಯ ವಿಲೇವಾರಿ ವಾಹದಲ್ಲಿ ಕಸ ಹಾಕಬೇಕು.