ಲಿಂಗಸುಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಘನತ್ಯಾಜ್ಯ ವಸ್ತುಗಳ ನಿಯಮ ಅನುಷ್ಠಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಗದ್ದೆಪ್ಪ ಮಾತನಾಡಿದರು. ಸಮೂಹ ಸಂಚಾಲಕರಾದ ಶಶಿಕಲಾ, ಗೀತಾ ಇದ್ದರು. 
ರಾಯಚೂರು

ನಾಲ್ಕು ವಿಧಗಳಲ್ಲಿ ತ್ಯಾಜ್ಯ ವಿಂಗಡಿಸಿ

ನರೇಶ್ ಕುಮಾರ್
ಲಿಂಗಸುಗೂರು: ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹೋಟೆಲ್ ಮಾಲೀಕರು, ವಾಣಿಜ್ಯ ಉದ್ದಿಮೆದಾರರು 4 ವಿಧದ ತ್ಯಾಜ್ಯಗಳಾದ ಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ಅಥವಾ ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕ್ರಮಬದ್ಧವಾಗಿ ವಿಲೇವಾರಿ ಮಾಡಬೇಕೆಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಗದ್ದೆಪ್ಪ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಪುರಸಭೆಯಿಂದ ಆಯೋಜಿಸಿದ್ದ ಘನತ್ಯಾಜ್ಯ ವಸ್ತುಗಳ ನಿಯಮ ಅನುಷ್ಠಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಘನತ್ಯಾಜ್ಯ ವಸ್ತುಗಳನ್ನು ರಸ್ತೆ, ಸಾರ್ವಜನಿಕ ಸ್ಥಳ, ಚರಂಡಿ ಅಥವಾ ಜಲಮೂಲಗಳಲ್ಲಿ ಎಸೆಯುವುದು, ಸುಡುವುದನ್ನು ನಿಷೇಧಿಸಲಾಗಿದೆ. ಘನ ತ್ಯಾಜ್ಯದಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಕಡಿಮೆ ಮಾಡಲು ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿ ಕಸದ ವಾಹನಕ್ಕೆ ಹಾಕಬೇಕು. 
ವಿದ್ಯಾರ್ಥಿಗಳು ತ್ಯಾಜ್ಯ ವಿಲೇವಾರಿ ಮಾಡುವ ವಿಧಾನಗಳನ್ನು ಇತರರಿಗೆ ತಿಳಿಸಿ ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಗಮನ ಹರಿಸಬೇಕು ಎಂದರು. ಸಮೂಹ ಸಂಚಾಲಕರಾದ ಶಶಿಕಲಾ, ಗೀತಾ, ಅನ್ನಪೂರ್ಣ, ಮಾನಸದೇವಿ ಇದ್ದರು.