ಸಿಂಧನೂರಿನಲ್ಲಿ ನಗರಸಭೆಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣೆ-2026ರ ಜಾಥಾಕ್ಕೆ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಚಾಲನೆ ನೀಡಿದರು. ಪಾಟೀಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆರ್.ಸಿ.ಪಾಟೀಲ್, ಸನ್‌ರೈಸ್ ಕಾಲೇಜಿನ ಪ್ರಾಂಶುಪಾಲ ಲಾಜರ್ ಸಿರೀಲ್, ನಗರಸಭೆ ಲೆಕ್ಕಾಧೀಕ್ಷಕ ಅಬ್ದುಲ್ ಇತರರಿದ್ದರು.  
ರಾಯಚೂರು

ತ್ಯಾಜ್ಯ ನಾಲ್ಕು ವಿಧಗಳಲ್ಲಿ ವಿಂಗಡಿಸಿ ಕೊಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಪಾಂಡುರಂಗ ಇಟಗಿ ಸಲಹೆ
  • ಸಿಂಧನೂರು ನಗರಸಭೆ ಘನತ್ಯಾಜ್ಯ ನಿರ್ವಹಣೆ ಜಾಥಾ
ಸಿಂಧನೂರು: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರತಿ ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡಬೇಕು ಎಂದು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಹೇಳಿದರು.
ಸ್ಥಳೀಯ ನಗರಸಭೆಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣೆ-2026ರ ಕುರಿತು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆಯಲ್ಲಿ ಹಳೆಯ ಬಟ್ಟೆ, ಪುಸ್ತಕಗಳು, ಆಟ ಸಾಮಗ್ರಿಗಳು, ಪೇಂಟ್ ಡಬ್ಬಾ, ಬಲ್ಪ್‌ಗಳನ್ನು ನಗರಸಭೆಯ ಆರ್‌ಆರ್‌ಆರ್ ಕೇಂದ ಹಾಗೂ ವಿಶೇಷ ಕಾಳಜಿ ಕೇಂದ ್ರಗಳಿಗೆ ನೀಡುವ ಮೂಲಕ ಸ್ವಚ್ಛ, ಸುಂದರ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಪಾಟೀಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆರ್.ಸಿ.ಪಾಟೀಲ್ ಮಾತನಾಡಿ, ಸಾರ್ವಜನಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ನಗರಸಭೆ ವಾಹನಕ್ಕೆ ವಿಂಗಡಿಸಿ ನೀಡಬೇಕು. ಪ್ಲಾಸ್ಟಿಕ್ ತ್ಯಜಿಸಿ, ಪರಿಸರಸ್ನೇಹಿ ಬಟ್ಟೆ ಚೀಲಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.
ಸನ್‌ರೈಸ್ ಕಾಲೇಜಿನ ಪ್ರಾಂಶುಪಾಲ ಲಾಜರ್ ಸಿರೀಲ್ ಮಾತನಾಡಿದರು. ನಗರಸಭೆ ಲೆಕ್ಕಾಧೀಕ್ಷಕ ಅಬ್ದುಲ್, ಸಿಇಒ ದುರುಗಪ್ಪ ಹಸಮಕಲ್, ವ್ಯವಸ್ಥಾಪಕ ಶರಣಬಸವರಾಜ, ಪರಿಸರ ಇಂಜಿನಿಯರ್ ಚೇತನಕುಮಾರ, ಕಿರಿಯ ಇಂಜನಿಯರ್‌ಗಳಾದ ಶಾಂತಕುಮಾರ, ಪ್ರವೀಣಕುಮಾರ, ಕಿರಣ, ಆರೋಗ್ಯ ನಿರೀಕ್ಷಕರಾದ ಕಿಶನ್‌ರಾವ್, ಹಣಮಂತ, ವೆಂಕಟೇಶ ಕುಮಾರ, ಗೌಡರ್ ಲಕ್ಷ್ಮೀಪತಿ, ಲಿಂಗರಾಜ, ಸಂಚಾರಿ ಪೊಲೀಸ್ ಠಾಣೆಯ ರಾಮಣ್ಣ, ನಗರಸಭೆ ಸಿಬ್ಬಂದಿ, ಸನ್‌ರೈಸ್ ಮತ್ತು ಬಸವಶ್ರೀ ಕಾಲೇಜು ವಿದ್ಯಾರ್ಥಿಗಳು ಇದ್ದರು.