ಅಸಮಾನತೆ ನಿವಾರಣೆಗೆ ಇರವಸಾಧ್ಯತೆಗಳು, ಬಾಧ್ಯತೆಗಳ ಕುರಿತು ಆಯೋಜಿಸಲಾಗಿರುವ ವಿಚಾರ ಸಂಕಿರಣವನ್ನು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಸಕ ದದ್ದಲ ಬಸನಗೌಡ, ಮುಖ್ಯ ಭಾಷಣಕಾರರಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ.ರಜಾಕ್ ಉಸ್ತಾದ, ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಹರಿವಿ ನಾಗನಗೌಡ ವಹಿಸಲಿದ್ದಾರೆ. ರೈತ ಹೋರಾಟಗಾರ ಚಾಮರಸ ಮಾಲಿ ಪಾಟೀಲ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪತಿ ಗಾಣಧಾಳ, ರಾಯಚೂರು ವಾಣೀಜ್ಯೋಧ್ಯಮ ಸಂಘದ ಅಧ್ಯಕ್ಷ ಕಮಲಕುಮಾರ ಜೈನ್ , ಸಾಹಿತಿ ವೀರಹನುಮಾನ, ಡಾ.ಶಾರದಾನಾಯಕ ಸೇರಿದಂತೆ ಅನೇಕ ಹೋರಾಟಗಾರರು ಭಾಗಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಾಮರಸ ಮಾಲಿ ಪಾಟೀಲ್, ಡಾ.ಶಾರದಾ ನಾಯಕ, ಜಾನವೆಸ್ಲಿ, ಬಿ.ಬಸವರಾಜ, ನಾಗನಗೌಡ ಹರವಿ ಇದ್ದರು.