ಸಿಂಧನೂರು ತಾಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಸುಗೂರಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಕೌದಿ, ಪ್ರೌಢ ಶಾಲೆ ಮುಖ್ಯಶಿಕ್ಷಕ ಬೀರಪ್ಪ ಶಂಭೋಜಿ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಹುಲುಗಪ್ಪ, ಕಾರ್ಯದರ್ಶಿ ವೆಂಕಟರೆಡ್ಡಿ, ನೀರಾವರಿ ಇಲಾಖೆಯ ಅಂಬಣ್ಣ ಇತರರಿದ್ದರು. 
ರಾಯಚೂರು

ಸುದೀರ್ಘ ಸೇವೆಯಿಂದ ಆತ್ಮ ಸಂತೃಪ್ತಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ
  • ಶಿಕ್ಷಕ
  • ಅತ್ಯಂತ
ಸಿಂಧನೂರು: ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ, ಮುಖ್ಯಶಿಕ್ಷಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸಲ್ಲಿಸಿದ ಸುದೀರ್ಘ ಸೇವೆ ನಮಗೆ ಆತ್ಮ ಸಂತೃಪ್ತಿ ನೀಡಿದೆ ಎಂದು ನಿವೃತ್ತ ಶಿಕ್ಷಕ ಸುಗೂರಯ್ಯಸ್ವಾಮಿ ಹೇಳಿದರು.
ತಾಲೂಕು ನಿವೃತ್ತ ನೌಕರರ ಸಂಘದಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಹಣ ಬಲಕ್ಕಿಂತ, ಗುಣಬಲವೇ ಇಲ್ಲಿ ಹೆಚ್ಚಿಗೆ ಸಿಗಲಿದೆ. ನಿವೃತ್ತಿಯ ನಂತರವೂ ಸಹೋದ್ಯೋಗಿಗಳು ಮತ್ತು ನೌಕರರ ಸಂಘವು ನನ್ನ ಸೇವೆಯನ್ನು ಗುರುತಿಸಿ, ಶಿಕ್ಷಕರ ದಿನಾಚರಣೆಯಂದೇ ಗೌರವಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಬಸವರಾಜ ವಿ. ಮಾತನಾಡಿ, ನಮ್ಮ ನಡುವಿನ ಹಿರಿಯ ಶಿಕ್ಷಕ ಸೂಗೂರಯ್ಯಸ್ವಾಮಿ ಅತ್ಯಂತ ಸರಳ ಮತ್ತು ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದರು.
ಪ್ರಮುಖರಾದ ಶಿವಬಸಪ್ಪ, ಪ್ರಭು ಶಂಬೇವಾಡ್, ಸೈಯದ್ ಅಬ್ರಹಾಂ ಅಹಮದ್, ನಿವೃತ್ತ ಪಿ.ಎಸ್.ಐ ಬಸವರಾಜ, ಹುಸೇನಬಾಷಾ, ಹುಸೇನಪ್ಪ, ಚಂದ್ರಶೇಖರ ಕಗ್ಗೋಡ, ಅಬ್ದುಲ್ ರಹೀಮ್, ಸಿದ್ದಯ್ಯ, ತಿಮ್ಮಾರೆಡ್ಡಿ, ಬಸಯ್ಯಸ್ವಾಮಿ, ತ್ರಿಶೂಲಧಾರಿಸ್ವಾಮಿ, ತಿಪ್ಪಣ್ಣ, ಪರಮೇಶಪ್ಪ, ಚಂದ್ರಕಲಾ, ಯಮನಮ್ಮ ಇತರರಿದ್ದರು.