ಚೀಕಲಪರ್ವಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಲಾಯಿತು. ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗೋಪಿಕೃಷ್ಣ ಇತರರಿದ್ದರು. 
ರಾಯಚೂರು

ಜಪ್ತಿ ಮಾಡಿದ ಮರಳು ರೈಲ್ವೆ ಕಾಮಗಾರಿಗೆ

ನರೇಶ್ ಕುಮಾರ್
ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ಹೊರವಲಯದ ನವಗ್ರಾಮ ಬಳಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದ್ದ ಅಡ್ಡೆ ಮೇಲೆ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗೋಪಿಕೃಷ್ಣ ಶುಕ್ರವಾರ ದಾಳಿ ನಡೆಸಿ ಜಪ್ತಿ ಮಾಡಿದರು.
ನಂತರ ತಹಸೀಲ್ದಾರ್ ಮಾತನಾಡಿ, ಮರಳು ಅಕ್ರಮ ದಾಸ್ತಾನು ನಡೆದ ಸ್ಥಳದ ಸುತ್ತಮುತ್ತ ವಿಚಾರಿಸಿದಾಗ ಕೃತ್ಯದಲ್ಲಿ ಭಾಗಿಯಾದವರು ಪತ್ತೆಯಾಗಿಲ್ಲ. ಹೀಗಾಗಿ ಜಪ್ತಿ ಮಾಡಿದ ಮರಳನ್ನು ಲಭ್ಯತೆ ಆಧರಿಸಿ ಭಾರತೀಯ ರೈಲ್ವೆ ಕಾಮಗಾರಿಗೆ ಹಣ ಪಾವತಿಸಿಕೊಂಡು ನಿಯಮದಂತೆ ನೀಡಲಾಗಿದೆ ಎಂದು ತಿಳಿಸಿದರು.