ಸಮದ್ ಪಾಷಾ 
ರಾಯಚೂರು

ಅ.6 ರಿಂದ ಸೆ.6ವರೆಗೆ ಸೀರತ್ ಅಭಿಯಾನ

ರಾಯಚೂರು

ಜಮಾಅತೆ ಇಸ್ಲಾಂ ಹಿಂದ್ ಕರ್ನಾಟಕ ಘಟಕದಿಂದ ಆ.26 ರಿಂದ ಸೆಪ್ಟೆಂಬರ್ 6 ವರೆಗೆ ಪ್ರವಾದಿ ಮಹ್ಮದ್ ಜನ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಸಲಾಗುತ್ತದೆಂದು ಸಂಘಟನೆ ಸದಸ್ಯ ಸಮದ್ ಪಾಷ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಾಂತಿಯ ಜ್ಯೋತಿ ಪ್ರವಾದ ಮಹ್ಮದ ಘೋಷದೊಂದಿಗೆ ಅಭಿಯಾನ ನಡೆಸಲಾಗುತ್ತದೆ. ಪ್ರವಾದಿ ಮಹ್ಮದ್ ಕುರಿತು ತಪ್ಪು ಕಲ್ಪನೆಗಳು ಹೋಗಲಾಡಿಸಿ ಪರಸ್ಪರ ಬಾಂಧವ್ಯ ಬಲಪಡಿಸುವದು ಅಭಿಯಾನ ಉದ್ದೇಶವಾಗಿದೆ.

ವಿಚಾರಗೋಷ್ಟಿ,ಸಾರ್ವಜನಿಕ ಸಮಾವೇಶಗಳು, ಸಂವಾದ, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕಿ ಬಿಶನ್, ಸಮಾಜಸೇವೆ, ಸೌಹಾರ್ದ ಸಂದೇಶ ರ‌್ಯಾಲಿಗಳು ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಸೀಮುದ್ದೀನ್ ಅಕ್ತರ್, ಮಹ್ಮದ್ ಎಜಾಜ್, ಅಬ್ದುಲ್ ಮತೀನ್, ಅಬ್ದುಲ್ ರಹಿಂ, ಶೇಖ ಅಹ್ಮದ್ ಇದ್ದರು.