ಅಮೀನಗಡದ ಈಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆಗಾಗಿ ಒದ್ದೆಬಟ್ಟಿಯಲ್ಲಿ ಸಿದ್ಧವಾದ ಭಕ್ತರು. ಗ್ರಾಪಂ ಮಾಜಿ ಅಧ್ಯಕ್ಷ ಅಮರೇಗೌಡ, ಪ್ರಮುಖರಾದ ಅಮರೇಶ ಅಂಕುಶದೊಡ್ಡಿ, ಸುರೇಶ ನೀರೋಳಿ, ಹನ್ನರಡ್ಡಿ ನಂದಿಹಾಳ, ಸಿದ್ದನಗೌಡ ಮಾ.ಪಾ, ಮಹಾಂತೇಶ ಸಂಪಿನವರು, ಪಂಪನಗೌಡ ಮೇದಿನಪೂರ, ವೀರೇಶ ಕಾರಲಕುಂಟಿ, ಚೇತನ ಸಹುಕಾರ, ದೇವರಡ್ಡೆಪ್ಪ ಸಂಪಿ, ಶರಣಬಸವ ಇತರರಿದ್ದರು.
ಕವಿತಾಳ: ಅಮೀನಗಡದ ಈಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು 72 ಗಂಟೆಯ ಸಪ್ತ ಭಜನೆ ಕಾರ್ಯಕ್ರಮ ಬುಧವಾರದಿಂದ ಹಮ್ಮಿಕೊಂಡಿದ್ದಾರೆ. ಮಳೆಯಿಲ್ಲದೆ ಬೆಳೆಗಳು ಬಾಡುತ್ತಿದ್ದು, ಭಜನೆ ಮಾಡುತ್ತಿದ್ದಾರೆ.
ಒದ್ದೆಬಟ್ಟೆಯಿಂದ ಕಟ್ಟಿಗೆ ಹಾಗೂ ಮಣಿನ ಮೇಲೆ ಮೂರು ತಾಸು ನಿಂತು ಓಂನಮಃ ಶಿವಾಯ ಮಂತ್ರ ಜಪಿಸಿ ಹಿಂದೆ ನೋಡದಂತೆ ಕುಳಿತುಕೊಳ್ಳದಂತೆ ಎಕಾಗ್ರತೆಯಿಂದ ಭಜನೆ ಮಾಡಿ ಪ್ರಾರ್ಥಿಸುತ್ತಾರೆ. ಸಪ್ತ ಭಜನೆ ಪೂರ್ಣಗೊಳ್ಳುವವರೆಗೆ ಗ್ರಾಮದ ಮಹಿಳೆಯರು ಅನ್ನ ದಾಸೋಹ ನಡೆಸುತ್ತಾರೆ. ಬುಧವಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.