ಸಿಂಧನೂರಿನಲ್ಲಿ ತಾಲೂಕು ಬಣಜಿಗ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಎಸ್.ಹಂಚಲಿ ಮುದ್ದೇಬಿಹಾಳ ಮಾತನಾಡಿದರು. ಪ್ರಮುಖರಾದ ಕಂಠೆಪ್ಪ ಸಾಹುಕಾರ ಮಂಟಗೇರಿ, ಸಿದ್ರಾಮಪ್ಪ ಸಾಹುಕಾರ ಮಾಡಸಿರವಾರ, ಮಲ್ಲೇಶಪ್ಪ ಸಾಹುಕಾರ ಇದ್ದರು.
- ಶಿಕ್ಷಕ
- ಅನಿಸಿಕೆ
- ಸಾಧಕರಿಗೆ ಸನ್ಮಾನ
ಭವಿಷ್ಯ ಉಜ್ವಲಗೊಳ್ಳಲು ಸಂಸ್ಕಾರ ಅತ್ಯಗತ್ಯವಾಗಿದೆ. ಸಂಸ್ಕಾರ ಇಲ್ಲದ ಮಕ್ಕಳು ಅಪಾಯಕಾರಿಯಾಗಿ ಬೆಳೆಯುತ್ತಿದ್ದಾರೆ ಎಂದು ಶಿಕ್ಷಕ ಬಿ.ಎಸ್.ಹಂಚಲಿ ಮುದ್ದೇಬಿಹಾಳ ಹೇಳಿದರು.
ತಾಲೂಕು ಬಣಜಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಣಜಿಗ ಸಮುದಾಯದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಕಾಯಕಯೋಗಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಬಣಜಿಗ ಸಮುದಾಯದವರು ಸಮಾಜದಲ್ಲಿ ಸಂಸ್ಕಾರದೊಂದಿಗೆ ಮುನ್ನಡೆದಿದ್ದಾರೆ ಎಂದರು.
12ನೇ ಶತಮಾನದಲ್ಲಿ ವಚನಕ್ರಾಂತಿಯಾಗಿದ್ದು, ವಚನಗಳು ಕಣ್ಮರೆಯಾಗುವಾಗ 15ನೇ ಶತಮಾನದಲ್ಲಿ ಬಣಜಿಗ ಸಮುದಾಯದ ಯಡೆಯೂರಿನ ತೋಂಟದಾರ್ಯ ಶ್ರೀಗಳು ವಚನಗಳಿಗೆ ಪುನರ್ಜನ್ಮ ನೀಡಿದರು. ಮಠಗಳಿಗೆ ಪೀಠಾಧಿಪತಿಗಳಾಗಿ, ಕಾಯಕ, ದಾಸೋಹ ಪರಂಪರೆಯನ್ನು ಪಾಲಿಸುವ ಸಮಾಜ ಇದಾಗಿದೆ ಎಂದರು.
ವೈದ್ಯ ದೊಡ್ಡಬಸವ ಮಾತನಾಡಿ, ಜೀವನದಲ್ಲಿ ಶ್ರಮ ವಹಿಸಿ ಉನ್ನತ ಸಾಧನೆ ಮಾಡಿದವರಿಗೆ ಬದುಕಿನ ಅರ್ಥ ತಿಳಿದಿರುತ್ತದೆ. ಪ್ರತಿಯೊಬ್ಬರೂ ನಿರಂತರ ಪ್ರಯತ್ನದ ಮೂಲಕವೇ ಸಾಧನೆ ಮಾಡಬೇಕು. ಆರ್ಥಿಕ ಸಂಕಷ್ಟ ಸೇರಿದಂತೆ ಯಾವುದೇ ಕಾರಣ ಹೇಳದೆ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.
ಸಮಾಜದ ಪ್ರಮುಖ ಕಂಠೆಪ್ಪ ಸಾಹುಕಾರ ಮಂಟಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ರಾಮಪ್ಪ ಸಾಹುಕಾರ ಮಾಡಸಿರವಾರ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗರಾಜ ಪಾಟೀಲ, ಡಾ.ಹರ್ಷ ತೋಟದ್, ವೀರೇಶ ದಿದ್ದಗಿ, ಮಲ್ಲೇಶಪ್ಪ ಚಂದ್ರಪ್ಪ ಸಾಹುಕಾರ, ಬಸವರಾಜ ಶೀಗರಗಡ್ಡಿ ವಕೀಲ, ಬಾಗೋಡೆಪ್ಪ ಸಾಹುಕಾರ, ವಿರೂಪಾಕ್ಷಪ್ಪ ಕೆಂಗಲ್, ವೀರೇಶ ಪಲ್ಲೇದ ಸಾಹುಕಾರ, ನಂದಿನಿ ವೀರೇಂದ್ರ ಪ್ರಸಾದ ಮೇರನಾಳ, ಸುಮಂಗಲಾ ಶಾಂತಪ್ಪ ಚಿಂಚರಕಿ ಇತರರಿದ್ದರು.