RAICHUR 
ರಾಯಚೂರು

ದರೋಡೆ,ಕೊಲೆ ಪ್ರಕರಣ ;ಅಪರಾಧಿಗೆ ಜೀವಾವಧಿ ಶಿಕ್ಷೆ

ರಾಚಯ್ಯ ಸ್ವಾಮಿ
ರಾಯಚೂರು ವ್ಯಕ್ತಿಯನ್ನು ಕೊಲೆ ಮಾಡಿ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ದೋಚಿ ಪಾರಾರಿಯಾಗಿದ್ದ ಇಬ್ಬರು ಅಪರಾಧಿಗಳ ಪೈಕಿ ಒಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೋಬ್ಬ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ 2ನೇ ಅಪರ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹಶ್ಯಾ ಹಾಗೂ ಮೌನೇಶ್ ಶಿಕ್ಷೆಗೆ ಗುರಿಯಾದ ಆರೋಪಿಗಳು.
2017 ಅಕ್ಟೋಬರ್ 4 ರಂದು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ ರಾತ್ರಿ 9 ಗಂಟೆಯ ಗಂಟೆಗೆ ಇಬ್ಬರೂ ಅಪರಾಧಿಗಳು ಕಳುವು ಮಾಡಲು ಮನೆಗೆ ನುಗ್ಗಿ ಮನೆಯಲ್ಲಿದ್ದ 50 ಸಾವಿರ ಹಣ ಹಾಗೂ 30,400 ರೂ. ಬೆಲೆ ಬಾಳುವ ಚಿನ್ನಾಭರಣವಿದ್ದ ಟ್ರಂಕ್‌ನ್ನು ಎತ್ತಿಕೊಂಡು ಪರಾರಿಯಾಗುವಾಗ ಮನೆಯವರು ಟ್ರಂಕ್‌ನ್ನು ಹಿಡಿದು ಜಗಿಬಿದ್ದಿದ್ದರಿಂದ ಒಬ್ಬ ಆರೋಪಿ ತನ್ನ ಕೈಯಲ್ಲಿದ್ದ ರಾಡಿಯಿಂದ ಬಲವಾಗಿ ಹೊಡೆದು ಇನ್ನೋಬ್ಬ ಅಪರಾಧಿ ಕೈಯಲ್ಲಿದ್ದ ಚಾಕುವಿನಿಂದ ಎದೆಗೆ ತಿವಿದು ಕೊಲೆ ಮಾಡಿರುತ್ತಾರೆ. ಈ ಕುರಿತು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಠಾಣೆಯ ಸಿಪಿಐ ಜಿ.ಚಂದ್ರಶೇಖರ ಆರೋಪಿಗಳ ಪತ್ತೆಹಚ್ಚಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ದರೋಡೆ ಹಾಗೂ ಕೊಲೆ ಆರೋಪ ಸಾಬೀತಾಗಿದ್ದರಿಂದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹತ್ತಿ ಕಾಳು ಪ್ರಭು ಎಸ್. ಅವರು ಆರೋಪಿ ಹಶ್ಯಾ ಗೆ ಐಪಿಸಿ 448,396,302,411 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ಮತ್ತು ಇನ್ನೋಬ್ಬ ಅಪರಾಧಿ ಮೌನೇಶಗೆ 2 ವರ್ಷ ಜೈಲು ಶಿಕ್ಷೆ , 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಸರ್ವಮಂಗಳ ವಾದ ಮಂಡಿಸಿದರು.