ಕುಷ್ಟಗಿಯಲ್ಲಿ ತಾಪಂ ಸಹಾಯಕ ಅಧಿಕಾರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಬೀರಪ್ಪ ಕುರಿ, ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಪ್ರಮುಖರಾದ ಚಂದಪ್ಪ ಗುಡಿಮನಿ, ಶಿವಪ್ಪ ವಾಗ್ಮೋರೆ ಇತರರಿದ್ದರು. 
ರಾಯಚೂರು

ಬಿಸಿಯೂಟದ ಆಹಾರ ಸಾಮಗ್ರಿ ದರ ಪರಿಷ್ಕರಿಸಿ

ಕುಷ್ಟಗಿ: 

ಸರ್ಕಾರಿ ಶಾಲೆಗಳ ಬಿಸಿಯೂಟ ಆಹಾರ ಸಾಮಗ್ರಿ ದರ ಪರಿಷ್ಕರಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಸೋಮವಾರ ತಾಪಂ ಎಡಿ ಗೀತಾ ಅಯ್ಯಪ್ಪಗೆ ಮನವಿ ಸಲ್ಲಿಸಿತು.

ಸರ್ಕಾರ ಪ್ರತಿ ಮೊಟ್ಟೆಗೆ 6 ರೂ. ದರ ನಿಗದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ 8 ರಿಂದ 9 ರೂ.ವರೆಗೆ ದರ ಇದ್ದು, ವಿದ್ಯಾರ್ಥಿಗಳಿಗೆ ನಿಗದಿತ ಮೊತ್ತದಲ್ಲಿ ಮೊಟ್ಟೆ ಪೂರೈಸುವುದು ಕಷ್ಟವಾಗಿದೆ. ಮೊಟ್ಟೆ ಜತೆಗೆ ಸಾಂಬಾರು ಪದಾರ್ಥಗಳು, ಸಕ್ಕರೆ ಹಾಗೂ ತರಕಾರಿಗಳ ಬೆಲೆಯೂ ಏರಿಕೆಯಾಗಿದ್ದು ದರ ಪರಷ್ಕರಿಸಬೇಕು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರ ಬಾಕಿ ಇರುವ ವೈದ್ಯಕೀಯ ಬಿಲ್‌ಗಳನ್ನು ತುರ್ತಾಗಿ ಅನುಮೋದಿಸಿ, ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. 
ಸಂಘದ ತಾಲೂಕು ಅಧ್ಯಕ್ಷ ಬೀರಪ್ಪ ಕುರಿ, ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಚಂದಪ್ಪ ಗುಡಿಮನಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೋರೆ, ಉಪಾಧ್ಯಕ್ಷ ರುದ್ರೇಶ ಬೂದಿಹಾಳ, ಕೋಶಾಧ್ಯಕ್ಷ ಮಹೇಶ ಪಡಿ, ಸಹ ಕಾರ್ಯದರ್ಶಿಗಳಾದ ಅಯ್ಯಪ್ಪ ಸುರಳ, ಗಿರಿಜಾ ದೇಸಾಯಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ತೆಮ್ಮಿನಾಳ, ನಿರ್ದೇಶಕ ಇಮಾಮ್‌ಸಾಬ್ ಮುಲ್ಲಾ, ಬಸನಗೌಡ ಗೌಡರ, ಜಯದೇವಿ ಉಪ್ಪಿನ, ವಿಜಯಲಕ್ಷ್ಮೀ ಮೇಟಿ, ಉಮಾ ಬಡಿಗೇರ, ಶರಣಮ್ಮ ಪೆದ್ದಿ, ಶಿವುಬಾಯಿ, ನಾಗರತ್ನಾ, ಮಲ್ಲಿಕಾರ್ಜುನ ಹಿರೇಮಠ, ಹನುಮಂತಪ್ಪ ವಾಲ್ಮೀಕಿ, ಶಿವಾನಂದ ಹೂಗಾರ, ಹನುಮಂತಪ್ಪ ನೀರಲಗಿ, ರಮೇಶ ಚವ್ಹಾಣ್, ಅಮರೇಗೌಡ ಸಣ್ಣಿಂಗಪ್ಪನವರ, ನಂದಬಸಪ್ಪ, ಅಡಿವೆಪ್ಪ ಇತರರಿದ್ದರು.