ಮಾನ್ವಿಯ ಕೋನಾಪುರ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರವೇ ತಾಲೂಕು ಘಟಕದಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಿಸಲಾಯಿತು. ತಾಲೂಕು ಅಧ್ಯಕ್ಷ ನರಸಿಂಹ, ಪ್ರಮುಖರಾದ ನವೀನ್‌ಕುಮಾರ್, ಶ್ರೀನಿವಾಸ, ತಾಯಪ್ಪ ,ಮಹೇಂದ್ರ ನಾಯಕ, ಸಿದ್ದಪ್ಪ ಇತರರಿದ್ದರು.  
ರಾಯಚೂರು

ಸರ್ವಧರ್ಮಗಳನ್ನು ಗೌರವದಿಂದ ಕಾಣಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಕವಿ
  • ಕುವೆಂಪು
  • ಜನ್ಮದಿನ
ಮಾನ್ವಿ: ರಾಷ್ಟ್ರಕವಿ ಕುವೆಂಪು ಬರೆದ ಸಾಹಿತ್ಯ ಆದರ್ಶವಾಗಿದೆ. ಅವರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ನರಸಿಂಹ ಹೇಳಿದರು.
ಪಟ್ಟಣದ ಕೋನಾಪುರ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕರವೇ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಸ್ಪರ ಧರ್ಮಗಳನ್ನು ದ್ವೇಷಿಸದೆ ಪ್ರೀತಿ, ಸಹೋದರತ್ವದಿಂದ ಸರ್ವಧರ್ಮಗಳನ್ನು ಗೌರವಿಸುವ ವ್ಯಕ್ತಿ ಮಾತ್ರ ವಿಶ್ವ ಮಾನವನಾಗಲು ಸಾಧ್ಯ ಎಂದರು.
ನಿವೃತ್ತ ಪಿಎಸ್‌ಐ ವೀರನಗೌಡ ಕರಡಿಗುಡ್ಡ ಮಾತನಾಡಿ, ಅನಾದಿ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಬೇರೂರಿರುವ ವರ್ಣಾಶ್ರಮ ವ್ಯವಸ್ಥೆ ದೇಶದ ಪ್ರಗತಿಗೆ ಮಾರಕವಾಗಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಜೀವಂತ ಇರುತ್ತದೆಯೋ ಅಲ್ಲಿವರೆಗೆ ಅಸಮಾನತೆ, ಹಿಂಸೆ, ಅತ್ಯಾಚಾರಗಳು ನಡೆಯುತ್ತವೆ. ಜಾತಿ ವ್ಯವಸ್ಥೆ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ವಿರೋಧಿಸಿದ ರಾಷ್ಟ್ರಕವಿ ಕುವೆಂಪು ಸ್ಫೂರ್ತಿಯಾಗಿದ್ದಾರೆ ಎಂದರು.
ಮುಖ್ಯಶಿಕ್ಷಕ ವಿರೂಪಾಕ್ಷಪ್ಪ, ಕರವೇ ತಾಲೂಕು ಗೌರವ ಅಧ್ಯಕ್ಷ ಯಲ್ಲಪ್ಪ ನಿಲಗಲ್, ಪ್ರಧಾನ ಕಾರ್ಯದರ್ಶಿ ದೀಪಕ್ ಯಾದವ್, ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ಪತ್ರಕರ್ತ ಸಂಘದ ಅಧ್ಯಕ್ಷ ಅಶೋಕ್ ತಡಕಲ್, ಉಪಾಧ್ಯಕ್ಷ ಗೂಳಪ್ಪ ಬೊಮ್ಮನಾಳ, ನಾಗರಾಜ ಶೆಟ್ಟಿ, ರವಿಕುಮಾರ ಮದ್ಲಾಪುರ, ಶಾಂತಕುಮಾರ, ಸನತ್‌ಕುಮಾರ್, ದೇವರಾಜ, ವಿನಯ್‌ಕುಮಾರ, ಅಂಜಿ ಯಾದವ ಇತರರಿದ್ದರು.