ದೇವದುರ್ಗದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ವೆಂಗಳಾಪುರ ತಾಂಡಾ ಜನರು ಮನವಿ ಸಲ್ಲಿಸಿದರು. ರೈತ ಮುಖಂಡ ಮಲ್ಲಯ್ಯ ಕಟ್ಟಿಮನಿ, ಗ್ರಾಮಸ್ಥರಾದ ಕೇಶವ ಜಾಧವ್, ವೆಂಕಟೇಶ, ನಾನಪ್ಪ, ಚಂದ್ರಪ್ಪ, ಟೀಕಪ್ಪ, ನೇನಪ್ಪ, ಸುಭಾಷ್, ಡಾಕಪ್ಪ, ತಿರುಪತಿ, ತಾನಪ್ಪ, ರಾಮ್‌ಜೀ, ವೆಂಕಟೇಶ, ಶಾಂತಮ್ಮ, ತಾರಮ್ಮ, ಸಕ್ರೆಮ್ಮ, ಗಂಗಮ್ಮ ಇತರರಿದ್ದರು.
- ವೆಂಗಳಾಪುರ ತಾಂಡಾದ ನಿವಾಸಿಗಳ ಒತ್ತಾಯ
- ದೇವದುರ್ಗ ತಹಸೀಲ್ದಾರ್ ಗೆ ಮನವಿ
ದೇವದುರ್ಗ: ಕಂದಾಯ ಗ್ರಾಮವಾಗಿ ಪರಿವರ್ತಿಸಿರುವ ತಾಲೂಕಿನ ವೆಂಗಳಾಪುರ ತಾಂಡಾಕ್ಕೆ ಸುಬ್ಬಣ್ಣ ಮಾಸ್ತರ್ ಗ್ರಾಮ ಬದಲಿಗೆ ರಾಮರಾವ್ ನಗರ ಎಂದು ಹೆಸರಿಡಲು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.
ವೆಂಗಳಾಪುರ ತಾಂಡಾ ಕರಿಗುಡ್ಡ ಗ್ರಾಪಂಗೆ ಒಳಪಟ್ಟಿದ್ದು, 65 ಕುಟುಂಬಗಳು 315 ಜನ ವಾಸಿಸುತ್ತಿದ್ದಾರೆ. ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಪಡೆಯದೆ ಕಂದಾಯ ಗ್ರಾಮಕ್ಕೆ ಸುಬ್ಬಣ್ಣ ಮಾಸ್ತರ್ ಎಂಬ ಹೆಸರು ಶಿಫಾರಸು ಮಾಡಿದ್ದಾರೆ. ಇದಕ್ಕೆ ಡಿಸಿ, ಎಸಿ ಅವರು ಅನುಮೋದಿಸಿದ್ದಾರೆ. ಕಂದಾಯ ಗ್ರಾಮ ಮಾಡುವ ಸಂದರ್ಭದಲ್ಲಿ ಹೆಸರು ನಾಮಕರಣಕ್ಕೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.
ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರೂ ಮಾನ್ಯ ಮಾಡದೆ 2-ಇ ಅಧಿಸೂಚನೆ ಹೊರಡಿಸಲಾಗಿದೆ. ಕಂದಾಯ ಗ್ರಾಮ ರಚನೆ ಸಂದರ್ಭದಲ್ಲಿ ತಹಸೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಭೂ ಮಾಪಕರು ನಿಯಮ ಉಲ್ಲಂಘಿಸಿದ್ದಾರೆ. ಕೂಡಲೇ ಗ್ರಾಮಕ್ಕೆ ರಾಮರಾವ್ ಎನ್ನುವ ಹೆಸರು ನಾಮಕರಣ ಮಡಬೇಕು. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.