ಲಿಂಗಸುಗೂರಿನಲ್ಲಿ ಮಂಗಳವಾರ ಲೇಕ್‌ಮ್ಯಾನ್ ಆನಂದ ಮಲ್ಲಿಗವಾಡ ಅವರು ಕೆರೆ ವೀಕ್ಷಿಸಿದರು. ಪ್ರಮುಖರಾದ ಬಸವಂತರಾಯ ಕುರಿ, ಶರಣಗೌಡ ಬಸ್ಸಾಪುರ, ರಮೇಶ ಶಾಸ್ತ್ರಿ, ವಿರೂಪಾಕ್ಷಯ್ಯ ಹಿರೇಮಠ, ಬಸವರಾಜ ಇತರರಿದ್ದರು. 
ರಾಯಚೂರು

ಅಂತರ್ಜಲ ವೃದ್ಧಿಗೆ ಕೆರೆ ಹೂಳು ತೆಗೆಯಿರಿ

ಪ್ರಮುಖ ಮುಖ್ಯಾಂಶಗಳು

  • ಕೆರೆ
  • ಲೇಕ್‌ಮ್ಯಾನ್
  • ಅಂತರ್ಜಲ ವೃದ್ಧಿ

ಅಂತರ್ಜಲ ವೃದ್ಧಿಗೆ ಕೆರೆ ಹೂಳು ತೆಗೆಯಿರಿ

ಲಿಂಗಸುಗೂರು: ಪರಿಸರ ಸಂರಕ್ಷಣೆ ಹಾಗೂ ಸರೋವರ ಪುನರುಜ್ಜೀವನ ಕ್ಷೇತ್ರದಲ್ಲಿ ಲೇಕ್‌ಮ್ಯಾನ್ ಎಂದೇ ಪ್ರಸಿದ್ಧರಾದ ಆನಂದ ಮಲ್ಲಿಗವಾಡ ಅವರು ಮಂಗಳವಾರ ಪಟ್ಟಣದ ಕೆರೆಯನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೂಳು ತೆಗೆದು ನೀರಿನ ಸಂಗ್ರಹ ಸಾಮರ್ಥ್ಯ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಜನರು, ರೈತರಿಗೆ ನೀರಿನ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಇಲ್ಲಿ ಬೋಟಿಂಗ್, ಗಾರ್ಡನ್ ರೂಪಿಸಿ ವ್ಯವಸ್ಥಿತವಾದ ಪ್ರವಾಸಿ ತಾಣವಾಗಿ ಮಾಡಬಹುದು. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮ ವಾತಾವರಣ ನಿರ್ಮಿಸಬಹುದು ಎಂದರು. ಪ್ರಮುಖರಾದ ಬಸವಂತರಾಯ ಕುರಿ, ಶರಣಗೌಡ ಬಸ್ಸಾಪುರ, ರಮೇಶ ಶಾಸ್ತ್ರಿ, ವಿರೂಪಾಕ್ಷಯ್ಯ ಹಿರೇಮಠ, ಬಸವರಾಜ ಇತರರಿದ್ದರು.