ಮುದಗಲ್ ರಾಮಲಿಂಗೇಶ್ವರ ದೇಗುಲದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಪ್ರಮುಖರಾದ ರಮೇಶ ಕಂದಗಲ್, ಈರಣ್ಣ ಹಡಪದ, ಮಹಾಂತೇಶ ಇಟ್ಟಂಗಿ ಕಾಶಿನಾಥ ಇತರರಿದ್ದರು.
- ಹಡಪದ ಅಪ್ಪಣ್ಣ ಜಯಂತಿ ಆಚರಣೆ
- ಪ್ರಮುಖ ಈರಣ್ಣ ಹಡಪದ ಅನಿಸಿಕೆ
ಮುದಗಲ್: ಶರಣ, ಸಂತರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುವುದು ಎಂದು ಪ್ರಮುಖ ಈರಣ್ಣ ಹಡಪದ ಹೇಳಿದರು. ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಪಣ್ಣನವರು ನಡೆದು ಬಂದ ದಾರಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮೈಗೂಡಿಸಿಕೊಂಡು ಆದರ್ಶ ಜೀವನ ನಡೆಸಬೇಕು ಎಂದರು. ಪ್ರಮುಖರಾದ ರಮೇಶ ಕಂದಗಲ್, ಅಮರೇಶ ಇಟ್ಟಂಗಿ, ಮಂಜಣ್ಣ ಕಂದಗಲ್, ರವಿ ಕಂದಗಲ್, ಮಲ್ಲಣ್ಣ ಹಡಪದ, ಶಿವರಾಜ ಅಬ್ಬಿಗೇರಿ, ಅಂಬರೀಶ, ಮಹಾಂತೇಶ ಕಂದಗಲ್, ಮಹಾಂತೇಶ ಇಟ್ಟಂಗಿ ಇತರರಿದ್ದರು.