ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂದೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಪ್ರಮುಖರಾದ ನಾಗರಾಜ ರೋಡಲಬಂಡಾ, ಸಂಗನಗೌಡ, ದಾವಲಸಾಬ, ಸಂಗಣ್ಣ ಹಿರೇಜಾವೂರು, ರಾಜಶೇಖರಗೌಡ, ಸೋಮಲೆಪ್ಪ ಜಂಗೀರಾಂಪುರ ತಾಂಡಾ, ಬಸವರಾಜ ಮುದಿಗೌಡ, ಬಾಷಾಸಾಬ್ ಗುರುಗುಂಟಾ ಇತರರಿದ್ದರು.
- ರೈತ ಸಂಘ-ಹಸಿರು ಸೇನೆ ಪ್ರತಿಭಟನೆ
- ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ
ಲಿಂಗಸುಗೂರು: ಜನ ಜಾನುವಾರುಗಳಿಗೆ ಕುಡಿವ ನೀರಿನ ಅಭಾವ ಉಂಟಾಗಿದ್ದು, ನಾರಾಯಣಪುರ ಬಲದಂಡೆ ಕಾಲುವೆಗೆ(ಎನ್‌ಆರ್‌ಬಿಸಿ) ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ರೋಡಲಬಂಡಾ (ಯುಕೆಪಿ), ಹಿರೇಜಾವೂರು, ಮೇಲಿನಗಡ್ಡಿ, ಜಂಗಿನಗಡ್ಡಿ, ಜಂಗೀರಾಂಪುರ ತಾಂಡಾ, ಚಿಕ್ಕ ಉಪ್ಪೇರಿ, ಸುಣಕಲ್ಲ, ಹಿರೇ ಉಪ್ಪೇರಿ, ಹಾಲಬಾವಿ, ತುಗ್ಗಲಿ, ಜಲದುರ್ಗ ಹಾಗೂ ಗುರುಗುಂಟಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗಳಲ್ಲಿ ದನಕರುಗಳಿಗೆ, ಜನರಿಗೆ ನೀರಿನ ಅಭಾವ ಎದುರಾಗಿದ್ದು, ಬಲದಂಡೆ ಕಾಲುವೆ ಬಂದ್ ಮಾಡಿದ್ದರಿಂದ ಮತ್ತಷ್ಟು ತೊಂದರೆಯಾಗಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನೀರು ಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಮನವಿಗೆ ಸ್ಪಂದಿಸದಿದ್ದಲ್ಲಿ ನೀರಾವರಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.