ಲಿಂಗಸುಗೂರಿನಲ್ಲಿ ಎಸಿಡಿಪಿಒ ರಾಜೇಶ್ವರಿಗೆ ಅಂಗನವಾಡಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷೆ ಸರಸ್ವತಿ ಈಚನಾಳ, ಲಕ್ಷ್ಮೀದೇವಿ ನಗನೂರು, ಮಹೇಶ್ವರಿ ಹಟ್ಟಿ, ಮಹಾದೇವಿ, ಸುಮಿತ್ರಾ, ಮಲ್ಲಮ್ಮ ಇತರರಿದ್ದರು.
- ಲಿಂಗಸುಗೂರಿನಲ್ಲಿ ಎಸಿಡಿಪಿಒ ರಾಜೇಶ್ವರಿಗೆ ಅಂಗನವಾಡಿ ನೌಕರರ ಮನವಿ
- ಅಂಗನವಾಡಿ ನೌಕರರ ಸಂಘ ಒತ್ತಾಯ
ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ತಾಲೂಕು ಸಮಿತಿಯಿಂದ ಶನಿವಾರ ಪಟ್ಟಣದಲ್ಲಿ ಎಸಿಡಿಪಿಒ ರಾಜೇಶ್ವರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಸಹಾಯಕಿಯರಿಗೆ 2023ರಿಂದ, ಕಾರ್ಯಕರ್ತೆಯರಿಗೆ 2025ರಿಂದ ಮಾತೃ ವಂದನ ಪ್ರೋತ್ಸಾಹಧನ ವಿತರಿಸಿಲ್ಲ. ಅನೇಕ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಅವರ ಕೆಲಸವನ್ನು ಕಾರ್ಯಕರ್ತೆಯರೇ ನಿಭಾಯಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸಹಾಯಕಿಯರನ್ನು ನೇಮಕ ಮಾಡಬೇಕು.
ಫೆಬ್ರವರಿಯಿಂದ ಅಂಗನವಾಡಿ ಕೇಂದ್ರಗಳ ಬಾಡಿಗೆ ಕಟ್ಟಡಗಳ ಬಾಕಿ ಹಣ ಬಿಡುಗಡೆ ಮಾಡಬೇಕು. 2020ರಿಂದ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗೌರವ ಧನವನ್ನು ಮೇಲ್ವಿಚಾರಕರು ಕಡಿತಗೊಳಿಸಿದ್ದು, ಅದನ್ನು ಪಾವತಿಸಬೇಕು. 2005ರಲ್ಲಿ ಮಂಜೂರಾದ ಬಾಲಭವನ, 2017ರಲ್ಲಿ ಮಂಜೂರಾದ ಸ್ತ್ರೀಶಕ್ತಿ ಭವನ ಕಟ್ಟಡ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಗಮನಹರಿಸಬೇಕು. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಮೇಲ್ವಿಚಾರಕಿಯರು ಬಿಎಲ್‌ಒ ಕೆಲಸದ ಒತ್ತಡ ಹೇರಬಾರದು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಅಧ್ಯಕ್ಷೆ ಸರಸ್ವತಿ ಈಚನಾಳ, ಗೌರವಾಧ್ಯಕ್ಷೆ ಲಕ್ಷ್ಮೀದೇವಿ ನಗನೂರು, ಕಾರ್ಯದರ್ಶಿ ಮಹೇಶ್ವರಿ ಹಟ್ಟಿ, ಪ್ರಮುಖರಾದ ಮಹಾದೇವಿ, ಸುಮಿತ್ರಾ, ಮಲ್ಲಮ್ಮ, ಮಹಾಂತಮ್ಮ, ಶಶಿಕಲಾ, ಕನಕಮ್ಮ, ಸಾವಿತ್ರಿ, ಲಕ್ಷ್ಮೀ, ಮಲ್ಲನಗೌಡ ಮುದಗಲ್ ಇತರರಿದ್ದರು.