ಹಿರೇಹಣಗಿಯಲ್ಲಿ ಏರ್ಪಡಿಸಿದ್ದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಮುಖವಾಡ ಧರಿಸಿ ಗಮನ ಸೆಳೆದರು. ಸಿಆರ್‌ಪಿ ಸೌಮ್ಯಶ್ರೀ, ಶಿಕ್ಷಕರಾದ ಅಮರೇಶ ಪಾಟೀಲ್, ಮಲ್ಲಮ್ಮ, ಭಾರತಿ, ಹುಲ್ಲಪ್ಪ ಘಂಟಿ, ಅಯ್ಯನಗೌಡ, ಮಹಾಂತೇಶ. ಸವಿತಾ ಇತರರಿದ್ದರು. 
ರಾಯಚೂರು

ಪ್ರತಿಭೆ ಗುರುತಿಸಿ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ

ಶಾಮಸುಂದರ್ ಕೊಪ್ಪಳಕರ್
ಕವಿತಾಳ: ಮಕ್ಕಳ ಪ್ರತಿಭೆ ಗುರುತಿಸಿ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಸಿಆರ್‌ಪಿ ಸೌಮ್ಯಶ್ರೀ ಹೇಳಿದರು. ಹಿರೇಹಣಗಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಏರ್ಪಡಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಗುವಿನಲ್ಲಿ ಒಂದಿಲ್ಲೊಂದು ಕೌಶಲ ಇದ್ದೇ ಇರುತ್ತದೆ. ಅದನ್ನು ಪಾಲಕರು, ಶಿಕ್ಷಕರು ಹೊರತರುವ ಪ್ರಯತ್ನ ಮಾಡಬೇಕು ಎಂದರು. 11 ಶಾಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಣಗಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬೀರಪ್ಪ, ಶಿಕ್ಷಕರಾದ ಅಮರೇಶ ಪಾಟೀಲ್, ಮಲ್ಲಮ್ಮ, ಭಾರತಿ, ಹುಲ್ಲಪ್ಪ ಘಂಟಿ, ಅಯ್ಯನಗೌಡ, ಮಹಾಂತೇಶ, ಸವಿತಾ, ರಂಜಿತಾ, ಬುಡ್ಡಪ್ಪ, ವಸಂತಕುಮಾರ, ಚನ್ನಬಸವರಾಜ, ನರೇಂದ್ರ, ನರಸಪ್ಪ, ಚೌರಪ್ಪ, ಪ್ರವೀಣಕುಮಾರ, ಮಂಜುನಾಥ, ಸಂಜೀವ ಕುಮಾರ ಇತರರಿದ್ದರು.