ಮಿಯ್ಯಪುರದಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಮುದ್ದುರಂಗಣ್ಣ, ಭೂದಾನಿ ಸೂಗಪ್ಪಗೌಡ ಪೊಪಾ, ಪ್ರಮುಖರಾದ ಹನುಮಂತಪ್ಪ ಕಟ್ಟಿಮನಿ, ಲಕ್ಷ್ಮಣ, ಮಹೇಶಗೌಡ, ಹನುಮಂತ್ರಾಯ ದೇವಲ್, ವಿರುಪನಗೌಡ, ಹೊನ್ನಪ್ಪ ಇದ್ದರು.
ದೇವದುರ್ಗ: ಪ್ರತಿಯೊಂದು ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ತಾಲೂಕಿನ ಮಿಯ್ಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಮಸರಕಲ್ ವಲಯ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿವೆ. ಮಕ್ಕಳ ಪ್ರತಿಭೆ ಗುರುತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ವಲಯ ಸಂಪನ್ಮೂಲ ವ್ಯಕ್ತಿ ವೀರಭದ್ರಯ್ಯ ಮಾತನಾಡಿ, 1ರಿಂದ 5ನೇ ತರಗತಿ ಮಕ್ಕಳಿಗೆ ಸಾಕ್ಷರತಾ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ಇದು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತವೆ. ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಬೇಕು ಎಂದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಂಜುಂಡಯ್ಯ, ರಾಮಸ್ವಾಮಿಗೆ ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮುದ್ದುರಂಗಣ್ಣ, ಭೂದಾನಿ ಸೂಗಪ್ಪಗೌಡ ಪೊಪಾ, ಪ್ರಮುಖರಾದ ಹನುಮಂತಪ್ಪ ಕಟ್ಟಿಮನಿ, ಲಕ್ಷ್ಮಣ, ಮಹೇಶಗೌಡ, ಹನುಮಂತ್ರಾಯ ದೇವಲ್, ವಿರುಪನಗೌಡ, ಹೊನ್ನಪ್ಪ, ಬಸವರಾಜ ಪಾಟೀಲ್, ರವಿಶಂಕರ, ಶಾಂತಪ್ಪ, ಶರಣಪ್ಪ, ವೆಂಕಟಾಚಲಪತಿ, ಚಂದ್ರಶೇಖರ, ಅಂಬಣ್ಣ, ವೆಂಕಟಾಂಜನೇಯ, ಶ್ರೀಶೈಲ, ಚಂದ್ರಶೇಖರ ಇದ್ದರು.