ಮಸ್ಕಿ ಶ್ರೀ ಬ್ರಮರಾಂಬ ದೇವಸ್ಥಾನದಲ್ಲಿ ರಮಾಬಾಯಿ ಅಂಬೇಡ್ಕರ್ ನಾಟಕವನ್ನು ನಗರಾಭಿವೃದ್ಧಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದನಗೌಡ ತುರ್ವಿಹಾಳ ಉದ್ಘಾಟಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ, ಸಿ.ದಾನಪ್ಪ, ದೊಡ್ಡಪ್ಪ ಮುರಾರಿ, ಡಾ.ಶಿವಶರಣಪ್ಪ ಇತ್ಲಿ, ರಾಜರಾಜೇಶ್ವರಿ ಹಿರೇಮಠ, ನಾಗರತ್ನಾ ಕಟ್ಟಿಮನಿ, ಎಚ್.ಬಿ.ಮುರಾರಿ, ಮಹಾಂತೇಶ ಮಸ್ಕಿ ಸುರೇಶ ಹರಸುರು, ದೊಡ್ಡ ಕರಿಯಪ್ಪ ಇತರರಿದ್ದರು.
ಮಸ್ಕಿ: ಪ್ರತಿಯೊಬ್ಬ ಯಶಸ್ವಿ ಪುರಷನ ಹಿಂದೆ ಮಹಿಳೆ ಇರುತ್ತಾಳೆ. ಅದರಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹಿಂದಿನ ಶಕ್ತಿ ಅವರ ಮಡದಿ ರಮಾಬಾಯಿ ಆಗಿದ್ದರು ಎಂದು ನಗರಾಭಿವೃದ್ಧಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಶ್ರೀ ಬ್ರಮರಾಂಬ ದೇವಸ್ಥಾನದಲ್ಲಿ ಸೋಮವಾರ ರಮಾಬಾಯಿ ಅಂಬೇಡ್ಕರ್ ನಾಟಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಹೋರಾಟಗಾರರ ಬದುಕು ಅನಿಶ್ಚಿತವಾಗಿರುತ್ತದೆ. ಡಾ.ಅಂಬೇಡ್ಕರ್ ಅವರ ಮಡದಿ ರಮಬಾಯಿ ಎಂದು ತಮ್ಮ ಮನೆಯ ವಿಷಯಗಳನ್ನು ಹೊರಗಡೆ ಹೇಳಿಕೊಳ್ಳದೆ ಗಂಡನಿಗೆ ಬೆಂಬಲವಾಗಿದ್ದರು. ಅಂಬೇಡ್ಕರ್ ಅವರ ಉನ್ನತ ಶಿಕ್ಷಣ ಮತ್ತು ಅವರ ಸಾಮರ್ಥ್ಯ ಮುಂದುವರಿಸಲು ಬೆನ್ನೆಲುಬಾಗಿದ್ದರು ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟಿಲ್ ಮಾತನಾಡಿ, ಡಾ.ಬಾಬಸಾಹೇಬ್ ಅಂಬೇಡ್ಕರ್ ವಿಶ್ವವಿಖ್ಯಾತ ಮಹಾಜ್ಞಾನಿಯಾಗಿದ್ದರು. ಅವರಿಗೆ ಓದುವಿನ ಹಸಿವು ಅಪಾರವಾಗಿತ್ತು. ಕುಟುಂಬಕ್ಕಿಂತ ಸಮಾಜದಲ್ಲಿನ ಅಸ್ಪ ೃಶ್ಯತೆ ಹೋಗಲಾಡಿಸುವುದಕ್ಕಾಗಿ ನಿರಂತರ ಹೋರಾಟದಲ್ಲಿ ತೊಡಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ಸಾಹಿತಿ ಸಿ.ದಾನಪ್ಪ, ಮಹಾಂತೇಶ ಮಸ್ಕಿ, ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಮಲ್ಲಯ್ಯ ಅಂಬಾಡಿ ಮಾತನಾಡಿದರು.