ರಾಯಚೂರಿನ ಕೋದಂಡ ರಾಮ ದೇವಸ್ಥಾನದಲ್ಲಿ ಶ್ರೀ ರಾಮದೇವರಿಗೆ ವಿಶೇಷ ಆಲಂಕಾರ ಮಾಡಿರುವುದು.
ರಾಯಚೂರು ಆದರ್ಶ ಪುರುಷ ಶ್ರೀರಾಮನವಮಿಯನ್ನು ನಗರ ಸೇರಿದಂತೆ ಜಿಲ್ಲಾಧ್ಯಂತ ನಾನಾ ರಾಮ ದೇವಸ್ಥಾನದಲ್ಲಿ ಶುಕ್ರವಾರ ಶ್ರದ್ದ ಭಕ್ತಿಯಿಂದ ಭಕ್ತರು ಆಚರಣೆ ಮಾಡಿದರು.
ನಗರದ ರೈಲ್ವೆ ನಿಲ್ದಾಣದ ಹತ್ತಿರದ ರಾಮಮಂದಿರ, ಕೋದಂಡ ರಾಮ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಅಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ನೆರೆದಿದ್ದರು. ನಂತರ ಶ್ರೀರಾಮನ ಕಲ್ಯಾಣೋತ್ಸವ ನೆರವೇರಿಸಲಾಯಿತು.
ವಿಶೇಷ ಪೂಜೆ,ಪುಷ್ಪಾಲಂಕಾರ ಸಲ್ಲಿಸಲಾಯಿತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ಅಲಂಕತ ಶ್ರೀರಾಮನ ದರ್ಶನ ಪಡೆದು ದೇವಸ್ಥಾನಗಳಲ್ಲಿ ಆಯೋಜನೆ ಮಾಡಿ ಅನ್ನ ಸಂತಾರ್ಪಣೆಯಲ್ಲಿ ಪ್ರಸಾದ ಸೇವನೆ ಮಾಡಿ ಪುನೀತರಾದರು. ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಇರುವ ಭಾವಚಿತ್ರವನ್ನಿಟ್ಟು ಅಲಂಕಾರ ಮಾಡಲಾಗಿತ್ತು. ಕೆಲವೇಡೆ ನವಮಿ ನಿಮಿತ್ತ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.