ಮುದಗಲ್ ಪಟ್ಟಣದ ಕ್ಲಿನಿಕ್‌ವೊಂದರ ಮೇಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್ ನೇತೃತ್ವದ ವೈದ್ಯರ ತಂಡ ದಾಳಿ ನಡೆಸಿ ಪರಿಶೀಲಿಸಿತು. 
ರಾಯಚೂರು

ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ

ಶಾಮಸುಂದರ್ ಕೊಪ್ಪಳಕರ್
ಮುದಗಲ್: ಪಟ್ಟಣದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿರುವ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಪಾಟೀಲ್ ನೇತೃತ್ವದ ತಂಡ ವಿವಿಧೆಡೆ ದಾಳಿ ನಡೆಸಿ ಪರಿಶೀಲಿಸಿತು.
ಪಟ್ಟಣದ ವಿವಿಧ ವಾರ್ಡಗಳಲ್ಲಿರುವ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಿಢೀರನೇ ದಾಳಿ ಮಾಡಿದರು. ವೈದ್ಯರ ತಂಡ ಬರುತ್ತಿರುವ ಮಾಹಿತಿ ಪಡೆದ ಅನೇಕರು ಕ್ಲಿನಿಕ್‌ಗಳನ್ನು ಬಂದ್ ಮಾಡಿದ್ದು ಕಂಡುಬಂತು. ನಂತರ ಶಂಕರಗೌಡ ಪಾಟೀಲ್ ಮಾತನಾಡಿ, ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಕೆಲವರು ಬೀಗ ಹಾಕಿದ್ದು, ನೋಟಿಸ್ ನೀಡಲಾಗುವುದು ಎಂದರು. ತಾಲೂಕು ಆರೋಗ್ಯ ಅಧಿಕಾರಿ ಅಮರೇಶ ಪಾಟೀಲ್, ವೈದ್ಯಾಧಿಕಾರಿ ದ್ಯಾಮಣ್ಣ ಹುಲ್ಲೂರು ಇದ್ದರು.