ಸಿಂಧನೂರು ತಾಲೂಕಿನ ಅರಗಿನಮರಕ್ಯಾಂಪಿನಲ್ಲಿ ನಕಲಿ ಕ್ಲಿನಿಕ್ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ನೇತೃತ್ವದ ತಂಡ ದಾಳಿ ನಡೆಸಿತು. ನೋಡಲ್ ಅಧಿಕಾರಿ ಸೈ.ಶಾಕೀರ, ಡಾ.ಅಮ್ಜದ್‌ಖಾನ್ ಇದ್ದರು. 
ರಾಯಚೂರು

ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ

ಪ್ರಮುಖ ಮುಖ್ಯಾಂಶಗಳು

  • ಸಿಂಧನೂರಿನಲ್ಲಿ 16 ಕಡೆ ಪರಿಶೀಲನೆ
  • ಎರಡಕ್ಕೆ ಬೀಗಮುದ್ರೆ, ಐದು ಆಸ್ಪತ್ರೆ ವಿರುದ್ಧ ಎಫ್‌ಐಆರ್
ಸಿಂಧನೂರು: ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಟಿಎಚ್‌ಒ ಡಾ.ಅಯ್ಯನಗೌಡ ನೇತೃತ್ವದ ತಂಡವು ್ಞವಿವಿಧ ಗ್ರಾಮಗಳಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿತು.
ಟಿಎಚ್‌ಒ ಡಾ.ಅಯ್ಯನಗೌಡ, ನೋಡಲ್ ಅಧಿಕಾರಿ ಡಾ.ಶಾಕೀರ, ಆಯುಷ್ ಅಧಿಕಾರಿ ಡಾ. ಅಹ್ಮದ್ ಷರೀಫ್, ಗ್ರಾಮೀಣ ಮತ್ತು ಬಳಗಾನೂರು ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಇತರ ಇಲಾಖಾ ಸಿಬ್ಬಂದಿ ಬೆಳಗುರ್ಕಿಯಲ್ಲಿ 1, ಅಲಬನೂರಿನಲ್ಲಿ 3 ಸೇರಿದಂತೆ ಒಟ್ಟು 16 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿತು.
 ಆಯಾ ಕ್ಲಿನಿಕ್‌ಗಳ ವೈದ್ಯರು ಹೊಂದಿರುವ ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ಹಾಗೂ ಯುನಾನಿ ಪದವಿ ಪ್ರಮಾಣಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಲಾಗಿದೆ. ಒಟ್ಟು 2 ಕ್ಲಿನಿಕ್‌ಗಳನ್ನುಸೀಜ್ ಮಾಡಲಾಗಿದ್ದು, 5 ಕ್ಲಿನಿಕ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉಳಿದ 9 ಕ್ಲಿನಿಕ್‌ಗಳ ಮಾಲೀಕರಿಗೆ ಸೂಕ್ತ ನೋಟಿಸ್ ಜಾರಿ ಮಾಡಲಾಗಿದೆ. 
ಜವಳಗೇರಾದಲ್ಲಿ 5, ಆರ್‌ಎಚ್ ಕ್ಯಾಂಪ್-3 , ಮರ ಕ್ಯಾಂಪ್‌ನಲ್ಲಿ 3, ಮಾಡಸಿರವಾರದಲ್ಲಿ 1 ಸೇರಿದಂತೆ ವಿವಿಧ ಭಾಗಗಳಲ್ಲಿ ಪರಿಶೀಲನಾ ಕಾರ್ಯ ನಡೆದಿದೆ. ಸಾರ್ವಜನಿಕರು ಅನಧಿಕೃತ ವೈದ್ಯರ ಕ್ಲಿನಿಕ್‌ಗಲ್ಲಿ ಚಿಕಿತ್ಸೆ ಪಡೆಯಬಾರದು. ಸರ್ಕಾರಿ, ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಬೇಕೆಂದು ಟಿಎಚ್‌ಒ ಡಾ.ಅಯ್ಯನಗೌಡ ಮನವಿ ಮಾಡಿದರು.