ರಾಯಚೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ನಿತೀಶ್ ಕೆ. ಅಧ್ಯಕ್ಷತೆಯಲ್ಲಿ ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಸಾರ್ವಜನಿಕರೊಂದಿಗೆ ಮಾಹಿತಿ ಸಂಗ್ರಹ ಸಭೆ ನಡೆಯಿತು. ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್‌ ಸುರೇಶ ವರ್ಮಾ ಇದ್ದರು. 
ರಾಯಚೂರು

ರಾಯಚೂರು ಉತ್ಸವ ಸಾರ್ವಜನಿಕರೊಂದಿಗೆ ಮಾಹಿತಿ ಸಂಗ್ರಹ

ಪ್ರಮುಖ ಮುಖ್ಯಾಂಶಗಳು

  • ಉತ್ಸವಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ- ಡಿಸಿ
  • ರಾಯಚೂರು ಉತ್ಸವ ಸಾರ್ವಜನಿಕರೊಂದಿಗೆ ಮಾಹಿತಿ ಸಂಗ್ರಹ
ರಾಯಚೂರು 25 ವರ್ಷಗಳ ನಂತರದಲ್ಲಿ ಜಿಲ್ಲೆಯಲ್ಲಿ ಅದ್ದೂರಿಯಾಗಿ ಮೂರು ದಿನ ರಾಯಚೂರು ಜಿಲ್ಲಾ ಉತ್ಸವವನ್ನು ಮಾಡಲು ನಿರ್ಧರಿಸಲಾಗಿದ್ದು, ಉತ್ಸವಕ್ಕೆ ಜಿಲ್ಲೆಯ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆಂದು ಜಿಲ್ಲಾಧಿಕಾರಿ ನಿತೀಶ್ ಕೆ., ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಸಾರ್ವಜನಿಕರೊಂದಿಗೆ ಮಾಹಿತಿ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಜ.29 ರಿಂದ 31ರವರೆಗೆ ನಗರದಲ್ಲಿ ಜಿಲ್ಲಾ ಉತ್ಸವವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಉತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಹಾಗೂ ಉತ್ಸವದಲ್ಲಿ ಆಯೋಜಿಸಬೇಕಾದ ಕಾರ್ಯಕ್ರಮಗಳ ಕುರಿತು ಸಂಘ ಸಂಸ್ಥೆಗಳು, ಸಾಹಿತಿಗಳು, ಚಿಂತಕರ, ಕಲಾವಿದರ ಸಲಹೆಗಳು ಅತ್ಯಗತ್ಯವಾಗಿರುತ್ತದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮುಖ್ಯ ವೇದಿಕೆ ಸೇರಿ, ವಿವಿಯ ಪ್ರೇಕ್ಷಾಗೃಹ, ರಂಗಮಂದಿರ ಸೇರಿ ನಾಲ್ಕು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಾಜ್ಯ ಸರ್ಕಾರದಿಂದ 2 ಕೋಟಿ ರೂ., ನಗರಾಭಿವೃದ್ಧಿ ಹಾಗೂ ಮಹಾನಗರ ಪಾಲಿಕೆಯಿಂದ 1 ಕೋಟಿ ರೂ. ಹಾಗೂ ಹಟ್ಟಿ ಚಿನ್ನದ ಗಣಿ, ಸ್ಥಳೀಯ ಕೈಗಾರಿಕಾ ಸಂಸ್ಥೆಗಳಿಂದ 1 ಕೋಟಿ ರೂ.ಗಳ ಅನುದಾನ ಬರಲಿದ್ದು, ಒಟ್ಟು 4 ಕೋಟಿ ರೂ. ವೆಚ್ಚದಲ್ಲಿ ಉತ್ಸವವನ್ನು ನಡೆಸಲಾಗುತ್ತದೆ. ಉತ್ಸವಕ್ಕೆ ಆರ್ಥಿಕ ಸಹಕಾರ ನೀಡುವವರು ಕೂಡ ಮುಂದೆ ಬರಬಹುದು ಎಂದರು.
ಜಿಲ್ಲಾ ಉತ್ಸವಕ್ಕಾಗಿ 15ರಿಂದ 20 ಕಲಾತಂಡಗಳಿಂದ ಅರ್ಜಿಗಳು ಬಂದಿದ್ದು, 137 ಜನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೆಸರುಗಳನ್ನು ನೀಡಿದ್ದಾರೆ. ಎಲ್ಲವನ್ನೂ ಕ್ರೂಡಿಕರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮಕ್ಕಳ ಉತ್ಸವ, ಕೃಷಿ ಮೇಳ, ಫಲಪುಷ್ಪ ಪ್ರದರ್ಶನ ಸೇರಿ ಇತರೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲು ತೀರ್ಮಾ ನಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.

ಸಾರ್ವಜನಿಕರಿಂದ ಮಾಹಿತಿ ಸಂಗ್ರಹ

ಕೋಟೆ ಅಧ್ಯಾಯನ ಸಮಿತಿಯ ಪ್ರಮುಖ ಸೈಯಾದ್ ಹಫಿಜುಲ್ಲ ಮಾತನಾಡಿ, ರಾಯಚೂರು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಆದ್ದರಿಂದ ಇಲ್ಲಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಉತ್ಸವದ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಶಾಂತಪ್ಪ ಮಾತನಾಡಿ, ಐತಿಹಾಸಿಕ ಕರ್ನಾಟಕ ಸಂಘದಿಅದ ಉತ್ಸವದ ಮೆರವಣಿಗೆ ಆರಂಭಿಸಬೇಕು. ಸ್ಮರಣ ಸಂಚಿಕೆ ಪ್ರಕಟಿಸಬೇಕು. ಹಳ್ಳಿಹಳ್ಳಿಗಳಿಂದ ಬಸ್ಸಗಳ ವ್ಯವಸ್ಥೆ ಮಾಡಿ ಜನ ಸೇರಲು ಅನುಕೂಲ ಕಲ್ಪಿಸಿ, ಇದನ್ನು ಜನೋತ್ಸವ ಮಾಡಬೇಕು. ಇದು ನಮ್ಮ ಕಾರ್ಯಕ್ರಮ. ಎಲ್ಲರೂ ನೋಡಿ ಮೆಚ್ಚುವಂತೆ ಈ ಉತ್ಸವ ಮಾಡೋಣ. ಹಂಪಿ ಉತ್ಸವ, ಕರಾವಳಿ ಉತ್ಸವ, ಲಕ್ಕುಂಡಿ ಉತ್ಸವ, ಬನವಾಸಿ ಉತ್ಸವ, ಕಿತ್ತೂರ ಉತ್ಸವ ರೀತಿ ಇನ್ಮೇಲೆ ರಾಯಚೂರು ಉತ್ಸವವು ಪ್ರತಿ ವರ್ಷ ನಡೆಯಬೇಕು ಎಂದರು.
ಹಿರಿಯ ಪತ್ರಕರ್ತ ಕೆ.ಸತ್ಯ ನಾರಾಯಣ ಮಾತನಾಡಿ, ಜಿಲ್ಲೆಯ ಎಲ್ಲ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಸಿಗಬೇಕು. ಉತ್ಸವದಲ್ಲಿ ರಾಯಚೂರು ಹಿರಿಯ ಮಹನಿಯರ ಪರಿಚಯದ ಭಾವಚಿತ್ರ ಅಳವಡಿಸಲು ಬಹುಜನ ಸಂಘಟನೆಯ ಜೈಭೀಮ ಸಲಹೆ ಮಾಡಿದರು. ಉತ್ಸವದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಉತ್ಸವವನ್ನು ಪ್ರತಿ ವರ್ಷ ನಡೆಸಬೇಕು ಎಂದು ನರೇಂದ್ರ ಅವರು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಬಹಳಷ್ಟು ಜಿಮ್ ಇದ್ದು, ಬಾಲಿಬಿಲ್ಡರಗಳ ಸ್ಪರ್ಧೆ ಆಯೋಜನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್‌ ಸುರೇಶ ವರ್ಮಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕವಿಗಳು, ಸಾಹಿತಿಗಳು ಪ್ರಗತಿಪರ ಚಿಂತಕರು ಇದ್ದರು.